ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿಯಲ್ಲಿ ಹಾರುವುದೇ ಕನ್ನಡ ಧ್ವಜ?
ಪುರಸಭೆ, ನಗರಸಭೆಗಳ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಮಹಾನಗರ ಪಾಲಿಕೆಗಳ ಮೇಯರ್, ಉಪ ಮೇಯರ್‌ಗಳ ಮೀಸಲು ಪಟ್ಟಿ ಬಿಡುಗಡೆಯಾಗುತ್ತಿದ್ದಂತೆಯೇ ರಾಜ್ಯದೆಲ್ಲೆಡೆ ಹರ್ಷದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲಕ್ಕಿಂತ ಹೆಚ್ಚಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಂಭ್ರಮ ಮತ್ತು ಕುತೂಹಲದ ವಾತಾವರಣ ಕಂಡುಬರುತ್ತಿದೆ.

ಇದಕ್ಕೆ ಕಾರಣ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿರುವ ಒಟ್ಟು 58 ಸದಸ್ಯರ ಪೈಕಿ ಕನ್ನಡ ಪರ ಸದಸ್ಯರ ಸಂಖ್ಯೆ 29 ಇದ್ದರೆ, ಎಂಇಎಸ್ ಹಾಗೂ ಅದರೆಡೆಗೆ ಒಲವು ಹೊಂದಿರುವ ಸದಸ್ಯರ ಬಲವೂ 29 ಆಗಿದೆ.

ಶತಾಯ ಗತಾಯ ಮೇಯರ್‌ಗಿರಿಯನ್ನು ದಕ್ಕಿಸಿಕೊಳ್ಳಬೇಕೆಂಬುದು ಎಂಇಎಸ್‌ನ ಹರಸಾಹಸವಾಗಿದ್ದರೆ, ಈ ಬಾರಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಧ್ವಜ ಹಾರಿಸಬೇಕು ಎಂಬುದು ಕನ್ನಡ ಪರ ಶಾಸಕರ ಬಯಕೆಯಾಗಿದೆ.

ಸದರಿ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಕನ್ನಡ ಪರ ಇರುವ 3 ಜನ ವಿಧಾನಸಭಾ ಸದಸ್ಯರು ಮತ ಚಲಾಯಿಸಬಹುದಾಗಿತ್ತು. ಆದರೆ ವಿಧಾನಸಭೆಯ ವಿಸರ್ಜನೆಯಾಗಿರುವುದರಿಂದ ಅವರು ಮತ ಚಲಾಯಿಸುವಂತಿಲ್ಲ. ಹೀಗಾಗಿ ಇದು ಕನ್ನಡಿಗರಿಗೆ ನಷ್ಟ ಎಂದುಕೊಳ್ಳಬಹುದು. ಆದರೂ ಸಹ ಬಿಜೆಪಿಯ ಸಂಸದ ಸುರೇಶ್ ಅಂಗಡಿಯವರು ಮತ ಚಲಾಯಿಸಬಹುದಾದ್ದರಿಂದ ಅವರ ಮತಕ್ಕೀಗ ಎಲ್ಲಿಲ್ಲದ ಬೆಲೆ ಬಂದಿದೆ.

ಈ ಬಾರಿ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್‌ಗಿರಿ ಸಾಮಾನ್ಯ ಮಹಿಳೆಯ ವರ್ಗಕ್ಕೆ ದಕ್ಕಿದೆ. ಈ ಮತದಾನ ಗೌಪ್ಯವಾಗಿರುವುದರಿಂದ ಯಾರಿಗೆ ತಮ್ಮ ಮತ ಸಲ್ಲಿಸುವೆ ಎಂದು ಸುರೇಶ್‌ರವರು ಹೇಳುವಂತಿಲ್ಲ. ಆದರೆ ಅವರ ಕನ್ನಡ ಪರ ಕಾಳಜಿಗಳನ್ನು ನೋಡಿದರೆ ಅವರು ಕನ್ನಡಕ್ಕೋಸ್ಕರ ಪಕ್ಷಾತೀತವಾಗಿ ವರ್ತಿಸಿ ಕನ್ನಡದ ಮೇಯರ್ ಆಯ್ಕೆಯಲ್ಲಿ ಕಾರಣಕರ್ತರಾಗುವರೆಂದು ನಂಬಲಾಗಿದೆ.
ಮತ್ತಷ್ಟು
ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ
ಬೇಡಿಕೆಗಳಿಗೆ ಒತ್ತಾಯಿಸಿ ಭಾನುವಾರ ರೈಲು ಬಂದ್
ಮಹಿಳೆಯ ಸಾವು: ಇಂದಿರಾನಗರ ಉದ್ವಿಗ್ನ
ಕೆಂಪಮ್ಮ ಕೊಲೆಯ ಸರಮಾಲೆಗೆ ಮತ್ತೊಂದು ಮಣಿ
ಜೆಡಿಎಸ್‌‌ನತ್ತ ಮೂಲ ಕಾಂಗ್ರೆಸ್ಸಿಗರ ವಲಸೆ: ದತ್ತಾ
ಪೌರಸಂಸ್ಥೆಗಳ ಮೀಸಲು ಪಟ್ಟಿ ಪ್ರಕಟ