ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗಣರಾಜ್ಯೋತ್ಸವಕ್ಕೆ ಸಂಭ್ರಮದ ಚಾಲನೆ
ಇಂದು (ಶನಿವಾರ) 59ನೇ ಗಣರಾಜ್ಯೋತ್ಸವ ಸಂಭ್ರಮ. ಬಿಗಿ ಭದ್ರತೆಯ ನಡುವೆ ನಗರದ ಮಾಣೆಕ್ ಷಾ ಪೆರೇಡ್ ಮೈದಾನದಲ್ಲಿ ಆರಂಭವಾದ ಗಣರಾಜ್ಯೋತ್ಸವ ಸಮಾರಂಭಕ್ಕೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅಧ್ವರ್ಯುವಾದರು.

ಉಗ್ರಗಾಮಿಗಳ ಬೆದರಿಕೆಯ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಬಿಗಿ ಭದ್ರತೆಗೆ ಹೆಚ್ಚಿನ ಆದ್ಯತೆ ಕೊಡಲಾಗಿತ್ತು. ಕ್ಯಾಮೆರಾ, ಮೊಬೈಲ್, ಕೊಡೆ, ನೀರಿನ ಬಾಟಲ್‌ಗಳನ್ನೂ ಸಹ ಪೆರೇಡ್ ಮೈದಾನಕ್ಕೆ ಕೊಂಡೊಯ್ಯುವಂತಿರಲಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವವರ ವಾಹನಗಳ ನಿಲುಗಡೆಗೆ ಬೇರೆಯೇ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಪೂರ್ವ ನಿಗದಿತ ಕಾರ್ಯಕ್ರಮದಂತೆ 9 ಗಂಟೆಗೆ ಧ್ವಜಾರೋಹಣ ಮಾಡಿದ ರಾಜ್ಯಪಾಲರು ಸೇನೆಯ 36 ತುಕಡಿಗಳಿಂದ ವಂದನಾರ್ಪಣೆ ಸ್ವೀಕರಿಸಿದರು. ನಂತರ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ಕಷ್ಟಗಳನ್ನು ನಿವೇದಿಸಿಕೊಳ್ಳಲು ತಮ್ಮ ಬಳಿಗೆ ಬರುವ ನೊಂದ ಜೀವಗಳಿಗೆ ಸಾಂತ್ವನ ಹೇಳುವ, ಸ್ಪಂದಿಸುವ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.

ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಗಳಿಗೆ ಸೇರಿದ ಸೇನಾಪಡೆಗಳಿಂದ ಆಕರ್ಷಕವಾದ ಪರೇಡ್ ಆಯೋಜಿಸಲಾಗಿದ್ದು ಅದು ಜನರ ಮನಸ್ಸನ್ನು ಸೂರೆಗೊಂಡಿತು.
ಮತ್ತಷ್ಟು
ಪದ್ಮ ಪ್ರಶಸ್ತಿ ಭೂಷಿತ ಕನ್ನಡ ಹೃದಯಗಳು
ಬೆಳಗಾವಿಯಲ್ಲಿ ಹಾರುವುದೇ ಕನ್ನಡ ಧ್ವಜ?
ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ
ಬೇಡಿಕೆಗಳಿಗೆ ಒತ್ತಾಯಿಸಿ ಭಾನುವಾರ ರೈಲು ಬಂದ್
ಮಹಿಳೆಯ ಸಾವು: ಇಂದಿರಾನಗರ ಉದ್ವಿಗ್ನ
ಕೆಂಪಮ್ಮ ಕೊಲೆಯ ಸರಮಾಲೆಗೆ ಮತ್ತೊಂದು ಮಣಿ