ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯ ವಿವಾದವಾಯಿತು; ಈಗ ವಾಸ್ತುದೋಷವೇ?
ಗೊಂದಲದ ಗೂಡಲ್ಲಿ ಕಡೆಗೋಲ ಕೃಷ್ಣ
ಕಡೆಗೋಲ ಕೃಷ್ಣನ ಊರಾದ ಉಡುಪಿ, ಪರ್ಯಾಯ ಉತ್ಸವಕ್ಕೆ ಸಂಬಂಧಿಸಿದ ಧಾರ್ಮಿಕೇತರ ವಿಷಯಗಳಿಗೆ ಇತ್ತೀಚಿನವರೆಗೂ ಕೊಂಚ ವಿವಾದಕ್ಕೀಡಾಗಿತ್ತು.

ಕೈ ಕೈ ಮಿಲಾಯಿಸುವ ಹಂತದವರೆಗೆ ಹೋಗಿದ್ದ ಇಲ್ಲಿನ ಕೆಲ ಮನಸ್ಸುಗಳು ಈಗ ಪರಸ್ಪರ ಹಸ್ತಲಾಘವ ಕೊಟ್ಟುಕೊಳ್ಳುವ, ತನ್ಮೂಲಕ ವಿವಾದಕ್ಕೆ ಇತಿಶ್ರೀ ಹಾಡುವ ಹಂತವನ್ನೂ ತಲುಪಿದ್ದವು.

ಆದರೆ ಶ್ರೀಕೃಷ್ಣ ದೇವಲಯಕ್ಕೆ ವಾಸ್ತುದೋಷವಿದೆ ಎಂಬ ಹೊಸ ವಿಷಯಕ್ಕೀಗ ಚಾಲನೆ ಸಿಕ್ಕಿದ್ದು ಶ್ರೀಕೃಷ್ಣ ಮಠದಲ್ಲಿನ ಇತ್ತೀಚಿನ ಅನಪೇಕ್ಷಿತ ಬೆಳವಣಿಗೆಗಳನ್ನು ಕಂಡಿದ್ದವರಲ್ಲಿ ಇದ್ದರೂ ಇರಬಹುದೇನೋ ಎಂಬ ಭಾವನೆ ಮೂಡಿಸಿದೆ.

ಸಾಮಾನ್ಯವಾಗಿ ಎಲ್ಲ ದೇವಾಲಯಗಳ ಮುಖ್ಯದ್ವಾರ ಪೂರ್ವದಿಕ್ಕಿಗೆ ಮುಖಮಾಡಿಕೊಂಡಿರುತ್ತದೆ. ವಾಸ್ತುಶಾಸ್ತ್ತ್ರದ ಅನುಸಾರ ಮುಖ್ಯದ್ವಾರದ ಮುಂದೆ ಮುಖಮಂಟಪ, ಅದರ ಮುಂದೆ ಗರ್ಭಗುಡಿ ಇರುತ್ತದೆ. ಆದರೆ ಶ್ರೀಕೃಷ್ಣ ದೇಗುಲದ ಪ್ರವೇಶದ್ವಾರ ದಕ್ಷಿಣ ದಿಕ್ಕಿನಲ್ಲಿದ್ದು, ಅದರ ಮೂಲಕ ಪ್ರವೇಶಿಸಿ ನಂತರ ನವಗ್ರಹ ಕಿಂಡಿಯ ಮೂಲಕ ದೇವರ ದರ್ಶನ ಮಾಡಬೇಕು. ಈ ವಾಸ್ತುದೋಷದ ಕಾರಣದಿಂದಲೇ ಉಡುಪಿಯಲ್ಲಿ ಇತ್ತೀಚೆಗೆ ನಡೆದ ವಾದ-ವಿವಾದ, ಉಪವಾಸದಂತಹ ಗೊಂದಲಗಳು ನಡೆದವು ಎಂಬುದು ಕೆಲವರ ಅಭಿಪ್ರಾಯ.

ಆದ್ದರಿಂದ ಈಗಿರುವ ಕನಕಗೋಪುರದೊಳಗಿನ ಕನಕನ ಕಿಂಡಿಯನ್ನು ಮುಖ್ಯದ್ವಾರವನ್ನಾಗಿ ಮಾರ್ಪಡಿಸಿದರೆ ದೇವಾಲಯದ ವಾಸ್ತುದೋಷ ನಿವಾರಣೆಯಾಗಿ ವಾಸ್ತಶಾಸ್ತ್ತ್ರದ ಅನ್ವಯ ದೇವಾಲಯಕ್ಕೆ ಪರಿಪೂರ್ಣ ಸ್ವರೂಪ ಸಿಗುತ್ತದೆ ಎಂಬ ವಿಷಯಕ್ಕೆ ಈಗ ಚಾಲನೆ ಸಿಕ್ಕಿದೆ. ಇದಕ್ಕೆ ವಾಸ್ತುಪಂಡಿತರು ಏನು ಅಭಿಪ್ರಾಯ ಪಡುವರೋ ಎಂಬುದರ ಕಡೆಗೆ ಈಗ ಎಲ್ಲರ ದೃಷ್ಟಿ ನೆಟ್ಟಿದೆ.
ಮತ್ತಷ್ಟು
ಗಣರಾಜ್ಯೋತ್ಸವಕ್ಕೆ ಸಂಭ್ರಮದ ಚಾಲನೆ
ಪದ್ಮ ಪ್ರಶಸ್ತಿ ಭೂಷಿತ ಕನ್ನಡ ಹೃದಯಗಳು
ಬೆಳಗಾವಿಯಲ್ಲಿ ಹಾರುವುದೇ ಕನ್ನಡ ಧ್ವಜ?
ಬ್ಯಾಂಕ್ ಮುಷ್ಕರ: ಗ್ರಾಹಕರ ಪರದಾಟ
ಬೇಡಿಕೆಗಳಿಗೆ ಒತ್ತಾಯಿಸಿ ಭಾನುವಾರ ರೈಲು ಬಂದ್
ಮಹಿಳೆಯ ಸಾವು: ಇಂದಿರಾನಗರ ಉದ್ವಿಗ್ನ