ಶನಿವಾರದಿಂದ ಜಾರಿಗೆ ಬರುವಂತೆ ರಾಜ್ಯದೆಲ್ಲಡೇ ಅನಿಯಮಿತ ಲೋಡ್‌ಶೆಡ್ಡಿಂಗ್ ಜಾರಿಗೊಳಿಸಲಾಗಿದ್ದು ಇನ್ನೆರಡು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿದುಬಂದಿದೆ.
ನಾಗ್ಝರಿ ಜಲವಿದ್ಯುತ್ ಸ್ಥಾವರದಲ್ಲಿ ಉಂಟಾಗಿರುವ ತಾಂತ್ರಿಕ ತೊಂದರೆಯಿಂದಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸುಮಾರು 1 ಸಾವಿರ ಮೆಗಾವ್ಯಾಟ್‌ನಷ್ಟು ಕೊರೆತ ಕಂಡುಬಂದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ವಿದ್ಯತ್ ಸರಬರಾಜು ನಿಗಮ ನಿಯಮಿತದ (ಕೆಪಿಟಿಸಿಎಲ್) ಪ್ರಕಟಣೆ ತಿಳಿಸಿದೆ.
ರಾಯಚೂರಿನ 210 ಮೆಗಾವಾಟ್ ಸಾಮರ್ಥ್ಯದ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಜೊತೆಗೆ ನಾಗ್ಝರಿಯಲ್ಲಿನ ಆರು ಘಟಕಗಳಲ್ಲಿ ಎರಡು ದುರಸ್ತಿಯಲ್ಲಿದ್ದು ಸ್ಥಗಿತಗೊಂಡಿದ್ದವು. ದುರಸ್ಥಿ ನಂತರವೂ ತಾಂತ್ರಿಕ ತೊಂದರೆಯುಂಟಾಗಿರುವುದರಿಂದ ಎಲ್ಲ ಘಟಕಗಳ ಉತ್ಪಾದನೆ ಸ್ಥಗಿತಗೊಂಡಿದೆ ಎಂದು ಕೆಪಿಟಿಸಿಎಲ್ ಮೂಲಗಳು ತಿಳಿಸಿವೆ.
ದುರಸ್ತಿಗೆ ಮತ್ತೆ ಚಾಲನೆ ದೊರೆತು ಪರಿಸ್ಥಿತಿ ಸುಧಾರಣೆಯಾದರೆ ಸೋಮವಾರದ ವೇಳೆಗೆ ಮತ್ತೆ ಎಂದಿನಂತೆ ವಿದ್ಯುತ್ ಪೂರೈಕೆಯ ವ್ಯವಸ್ಥೆಯಾಗಲಿದೆ ಎಂದು ಕೆಪಿಟಿಸಿಎಲ್ ಮೂಲಗಳು ಸ್ಪಷ್ಟಪಡಿಸಿವೆ.
|