ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅತಿದೊಡ್ಡ ಮ್ಯೂರಲ್ ಉದ್ಘಾಟನೆ
ಬಂಟರಲ್ಲೂ ಸಾಂಸ್ಕ್ಕತಿಕ ರಸಾಸ್ವಾದನೆ ಸಾಧ್ಯ ಎಂಬುದನ್ನು ಬಂಟರ ಸಂಘ ಸಾಬೀತು ಪಡಿಸಿದೆ ಎಂದು ಚಿತ್ರಕಲಾ ಪರಿಷತ್ ಮಾಜಿ ಕಾರ್ಯದರ್ಶಿ ಡಿ.ಕೆ.ಚೌಟ ಅಭಿಪ್ರಾಯ ಪಟ್ಟಿದ್ದಾರೆ.

ಬಂಟರ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಖ್ಯಾತ ಮ್ಯೂರಲ್ಸ್ ಕಲಾವಿದ ಶ್ರೀಕೃಷ್ಣಭಟ್ ವಿರಚಿತ ಬೃಹತ್ ಗಾತ್ರದ ಭಿತ್ತಿಚಿತ್ರವನ್ನು ಅನಾವರಣಗೊಳಿಸಿ ಮಾತನಾಡುತ್ತಿದ್ದ ಅವರು, ಈ ಚಿತ್ರದಲ್ಲಿ ತುಳುನಾಡಿನ ಸಮಗ್ರ ಪರಂಪರೆಯೇ ಬಿಂಬಿತವಾಗಿದೆ. ಪರಿವರ್ತಿತ ಸಮಾಜಕ್ಕೆ ಮ್ಯೂರಲ್ಸ್ ಕಲೆಯನ್ನು ಪರಿಚಯಿಸುವ ಮೂಲಕ ಕಲಾವಿದ ಶ್ರೀಕೃಷ್ಣಭಟ್‌ರವರು ಈ ಅನನ್ಯ ಕಲೆಗೆ ಹೊಸ ಹೊಳಹು ನೀಡಿದ್ದಾರೆ ಎಂದು ಪ್ರಶಂಸಿಸಿದರು.

ಬೆಂಗಳೂರಿನಲ್ಲಿ ಈಗಾಗಲೇ ಹಲವಾರು ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳಿವೆ. ಈ ಬೃಹತ್ ಮ್ಯೂರಲ್ಸ್ ಭಿತ್ತಿಚಿತ್ರದ ಅಳವಡಿಕೆಯಿಂದಾಗಿ ಬಂಟರ ಸಂಘವೂ ಬೆಂಗಳೂರಿನ ಪ್ರೇಕ್ಷಣೀಯ ಸ್ಥಳಗಳಲ್ಲೊಂದಾಗಲಿದೆ ಎಂದು ಚೌಟ ವಿಶ್ವಾಸ ವ್ಯಕ್ತಪಡಿಸಿದರು.

ಕಾಸರಗೋಡಿನ ಹಿರಿಯ ಕಲಾವಿದ ಪುಣಿಚಿತ್ತಾಯರವರು ತಮ್ಮ ಶಿಷ್ಯ ಶ್ರೀಕೃಷ್ಣಭಟ್ ಅನುಪಮ ಕಲೆಯನ್ನು ಪ್ರಶಂಸಿದ್ದೇ ಅಲ್ಲದೆ, ಕಲಾವಿದರಿಗೆ ಹೀಗೆ ಪ್ರೋತ್ಸಾಹ ನೀಡುವುದರಿಂದಲೇ ಕಲೆ ಮತ್ತು ಕಲಾವಿದ ಬೆಳೆಯಲು ಸಾಧ್ಯ ಎಂದು ಬಂಟರ ಸಂಘದ ಪ್ರೋತ್ಸಾಹವನ್ನು ಶ್ಲಾಘಿಸಿದರು.

ಮ್ಯೂರಲ್ಸ್ ಕಲಾವಿದ ಶ್ರೀಕೃಷ್ಣಭಟ್, ಬಂಟರ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿಯವರು ಮಾತನಾಡುತ್ತಾ, ಬಂಟರ ಸಮುದಾಯದಲ್ಲಿ ಕಲಾಭಿರುಚಿ ಇಲ್ಲ ಎನ್ನುವುದೊಂದು ಮಾತಿದೆ. ಆದರೆ ಬಂಟರಲ್ಲಿನ ಕಲಾಭಿರುಚಿಯನ್ನು ಹೊರಹೊಮ್ಮಿಸುವಲ್ಲಿ ಹಾಗೂ ಉದ್ದೀಪಿಸುವಲ್ಲಿ ಸಂಘವು ಅಗ್ರಪಂಕ್ತಿಯನ್ನು ಹಾಕಿಕೊಡಲಿದೆಯಲ್ಲದೇ ಮುಂದೆ ಇದೇ ರೀತಿಯ ಹಲವು ಕಲಾಪ್ರಕಾರಗಳನ್ನು ಪ್ರೋತ್ಸಾಹಿಸಲೂ ಯೋಜಿಸಲಿದೆ ಎಂದು ತಿಳಿಸಿದರು. ಖ್ಯಾತ ಒಳಾಂಗಣ ವಿನ್ಯಾಸಕಿ ವೀನೀತಾ ಚೈತನ್ಯ ಹಾಗೂ ಖ್ಯಾತ ವಾಸ್ತುಶಿಲ್ಪಿ ಅನೂಪ್ ನಾಯಕ್ರವರುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು
ಅರಮನೆಯ ಅಂಗಳದಲ್ಲಿ ರಂಗುಗಳ ಚೆಲುವಿನ ಚಿತ್ತಾರ
ಗಣರಾಜ್ಯೋತ್ಸವದ ಸಡಗರದಲ್ಲಿ ಅಪಸ್ವರ
ರಾಜ್ಯದಲ್ಲಿ ವಿದ್ಯುತ್ ವ್ಯತ್ಯಯ
ಪರ್ಯಾಯ ವಿವಾದವಾಯಿತು; ಈಗ ವಾಸ್ತುದೋಷವೇ?
ಗಣರಾಜ್ಯೋತ್ಸವಕ್ಕೆ ಸಂಭ್ರಮದ ಚಾಲನೆ
ಪದ್ಮ ಪ್ರಶಸ್ತಿ ಭೂಷಿತ ಕನ್ನಡ ಹೃದಯಗಳು