ಚುನಾವಣೆ ಮುಂದೂಡಲು ಕಾಂಗ್ರೆಸ್ ತನ್ನ ಸಂಚು ಮುಂದುವರಿಸಿದಲ್ಲಿ ಸುಪ್ರೀಂಕೋರ್ಟಿಗೆ ಹೋಗುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ಕುಂಟು ನೆಪಗಳನ್ನೊಡ್ಡಿ ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಚುನಾವಣೆ ಮುಂದೂಡಿದಲ್ಲಿ ರಾಜ್ಯದ ಅಭಿವೃದ್ದಿಗೆ ಮಾರಕವಾಗಿಯೂ ಪರಿಣಮಿಸುತ್ತದೆ. ಆದ್ದರಿಂದ ಆದಷ್ಟು ಬೇಗ ಚುನಾವಣೆ ನಡೆಸಿ ಜನ ಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ಒಳ್ಳೆಯದು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.
ರಾಜ್ಯದಲ್ಲಿನ ಅಬಿವೃದ್ದಿ ಕಾರ್ಯಗಳು ಈಗಾಗಲೇ ಸ್ಥಗಿತಗೊಂಡಿವೆ. ಇದರ ಕುರಿತಾದ ಮಾಹಿತಿ ಬೇಕೆಂದರೆ ರಾಜ್ಯಪಾಲರು ತಮ್ಮ ಸಲಹೆಗಾರರನ್ನು ರಾಜ್ಯದೆಲ್ಲೆಡೆ ಕಳಿಸಿ ವಿವರ ತರಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಪ್ರವಾಸೋದ್ಯಮ, ನಂಜುಂಡಪ್ಪ ವರದಿ ಜಾರಿ, ನೀರಾವರಿ ಇತ್ಯಾದಿ ಬಾಬತ್ತುಗಳಿಗಾಗಿ ಮೀಸಲಿಡಲಾಗಿದ್ದ ಹಣದ ಬಳಕೆಯಿನ್ನೂ ಆಗಿಲ್ಲ. ಇವೆಲ್ಲವನ್ನೂ ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಯಡಿಯೂರಪ್ಪ ಟೀಕಿಸಿದರು.
|