ನಗರದ ಹೊರವಲಯದ ಜೆಪ್ಪಿನ ಮೊಗರು ಬಳಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲಿಯೇ ಮೃತಪಟ್ಟು ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ನತದೃಷ್ಟರು ಪ್ರಯಾಣಿಸುತ್ತಿದ್ದ ಮಾರುತಿ ಓಮ್ನಿ ವ್ಯಾನು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಾಗ, ತಂತಿಯಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಕಿಡಿ ವ್ಯಾನಿನಲ್ಲಿದ್ದ ಗ್ಯಾಸ್ ಸಿಲಿಂಡರಿಗೆ ತಗುಲಿ ಅದು ಸ್ಫೋಟಗೊಂಡಿತು. ಇದರಿಂದಾಗಿ ಎಂಟು ಮಂದಿಯೂ ಸ್ಥಳದಲ್ಲಿಯೇ ಸುಟ್ಟು ಕರಕಲಾದರು ಎಂದು ತಿಳಿದುಬಂದಿದೆ.
ಅಸು ನೀಗಿದವರನ್ನು ಸಂಜಯ್, ರಾಜೇಶ್, ಸುಧೀರ್, ಪ್ರಮೋದ್, ಬೀರೇಂದ್ರ, ರವಿ, ಪ್ರಸಾದ್ ಮತ್ತು ದೇವರಾಜು ಎಂದು ಗುರುತಿಸಲಾಗಿದ್ದು, ಇವರೆಲ್ಲಾ ಕೂಲಿ ಕಾರ್ಮಿಕರಾಗಿದ್ದು ಮಂಗಳೂರಿನ ಅತ್ತಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಸುದ್ದಿಮೂಲಗಳು ತಿಳಿಸಿವೆ.
ತೀವ್ರವಾಗಿ ಗಾಯಗೊಂಡಿರುವ ಅರ್ಜುನ್, ಮುನ್ನಾ ಹಾಗೂ ಸತ್ಯೇಂದ್ರ ಕುಮಾರ್ ಎಂಬುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
|