ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಡುಪಿ: ಅಷ್ಟಮಠಾಧೀಶರ ಮಹತ್ವದ ಸಭೆ ಇಂದು
ಹಲವು ವಿವಾದಗಳಿಗೆ ಕಾರಣವಾದ ಪರ್ಯಾಯ ಉತ್ಸವ ಮುಗಿದಿದ್ದು, ಮನಸ್ತಾಪಗೊಂಡಿದ್ದ ಅಷ್ಟಮಠಾಧೀಶರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರು ಸೋಮವಾರ ಮಹತ್ವದ ಸಭೆ ಕರೆದಿದ್ದಾರೆ.

ಈ ಸಭೆಗೆ ಅಷ್ಟ ಯತಿಗಳಿಗೂ ಆಹ್ವಾನ ಹೋಗಿದ್ದು, ಪೇಜಾವರ ಶ್ರೀ ವಿಶ್ವೇಶ ತೀರ್ಥರು ಸೇರಿದಂತೆ ಎಲ್ಲಾ ಮಠಾಧೀಶರು ಇಂದು ನಡೆಯುವ ಸಭೆಯಲ್ಲಿ ಭಾಗವಹಿಸುವುದು ನಿಚ್ಚಳವಾಗಿದೆ. ಸಪ್ತ ಯತಿಗಳ ನಿಲುವನ್ನು ಉಲ್ಲಂಘಿಸಿ ಪುತ್ತಿಗೆ ಶ್ರೀಗಳು ಪರ್ಯಾಯದ ಗದ್ದುಗೆ ಏರಿದ್ದು, ಯತಿಗಳೊಡನೆ ವೈಮನಸ್ಯಕ್ಕೆ ಕಾರಣವಾಗಿತ್ತು. ಆದರೆ ಪರ್ಯಾಯ ಪೀಠವನ್ನೇರಿದ ಪುತ್ತಿಗೆ ಶ್ರೀಗಳು ಶ್ರೀಕೃಷ್ಣನನ್ನು ಮುಟ್ಟದೆಯೇ ಪೂಜೆ ನಡೆಸುತ್ತಿರುವುದು ಇತರ ಯತಿಗಳ ಸಮಾಧಾನಕ್ಕೆ ಕಾರಣವಾಗಿದೆ.

ಇಂದು ನಡೆಯುವ ರಹಸ್ಯ ಸಭೆಯಲ್ಲಿ ಎಲ್ಲಾ ಯತಿಗಳು ಭಾಗವಹಿಸಲಿದ್ದಾರೆ ಎಂದು ಪುತ್ತಿಗೆ ಮಠದ ಮೂಲಗಳು ತಿಳಿಸಿವೆ. ಮುಂದಿನ ದಿನಗಳಲ್ಲಿ ಶಾಸ್ತ್ರ ಹಾಗೂ ಸಂಪ್ರದಾಯಕ್ಕೆ ಸಂಬಂಧಿಸಿದಂತೆ ವಿವಾದಗಳು ತಲೆ ಎತ್ತದಂತೆ ಲಿಖಿತ ಸಂವಿಧಾನ ರಚಿಸುವ ಬಗ್ಗೆ ನಿರ್ಣಯಿಸುವ ಸಾಧ್ಯತೆಯಿದೆ.

ಇಂದು ಸಂಜೆಯ ವೇಳೆಗೆ ಸಭೆಯ ತೀರ್ಮಾನಗಳು ಹೊರಬರಲಿದ್ದು, ಆಸ್ತಿಕ ಜನತೆಯ ಕುತೂಹಲಕ್ಕೆ ಉತ್ತರ ಸಿಗುವ ಸಾಧ್ಯತೆ ಇದೆ.
ಮತ್ತಷ್ಟು
ಕಲುಷಿತ ನೀರು: ಮಹಿಳೆ ಸಾವು, ಹಲವರು ಆಸ್ಪತ್ರೆಗೆ
ಗಿನ್ನಿಸ್ ದಾಖಲೆ ಸೇರಿದ 40 ಗಂಟೆ ಕೊಂಕಣಿ ಗಾಯನ
8 ಶಾಸಕರು ಕಾಂಗ್ರೆಸಿಗೆ; ಪ್ರಕಾಶ್ ಮತ್ತಷ್ಟು ವಿಳಂಬ
ಕನ್ನಡಕ್ಕಾಗಿ, ಕನ್ನಡಿಗರಿಗಾಗಿ ರಾಜ್ಯಾದ್ಯಂತ ರೈಲು ತಡೆ
ಬಿಜಾಪುರ ಬಳಿ ಲಾರಿ ಮಗುಚಿ 10 ಮಂದಿ ಸಾವು
ವ್ಯಾನ್ ಅಪಘಾತ : 8 ಮಂದಿ ಸಜೀವ ದಹನ