ಮೂವರು ದುಷ್ಕರ್ಮಿಗಳು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಬೆದರಿಸಿ ಸುಮಾರು 10 ಲಕ್ಷ ರೂ.ಗಳನ್ನು ದೋಚಿ ಪರಾರಿಯಾದ ಘಟನೆ ಎಲೆಕ್ರ್ಟಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.
ಚಂದಾಪುರ ನಿವಾಸಿ ಭೀಮರಾಜ್ ಎಂಬುವವರನ್ನು ಹೊಸೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಕಾಲು ಕೆರೆದು ಜಗಳ ಮಾಡಿ ಹಣ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಎಲೆಕ್ರ್ಟಾನಿಕ್ ಸಿಟಿಯಲ್ಲಿರುವ ಆರ್.ಎಸ್. ಎಂಟರ್ಪ್ರೈಸಸ್ ಕಚೇರಿಗೆ ಭೀಮರಾಜ್ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಭೀಮರಾಜ್ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಒಬ್ಬ ಮೋಟಾರ್ ಬೈಕ್ ಸವಾರನೊಬ್ಬನು ಡಿಕ್ಕಿ ಹೊಡೆದು ಬಳಿಕ ಅವರಿಂದ ರಿಪೇರಿಗೆಂದು ಹಣ ಪಡೆದುಕೊಂಡನು. ಅನಂತರ ಭೀಮರಾಜ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಮೂವರು ದುಷ್ಕರ್ಮಿಗಳು ಬೆದರಿಸಿ ಹಣ ಸುಲಿಗೆ ಮಾಡಿದರೆಂದು ತಿಳಿದು ಬಂದಿದೆ.
ಈ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
|