ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹಕ್ಕಿ ಹಾಡು' ಬಿಡುಗಡೆಗೆ ಅಡ್ಡಿ: ಬ್ಯಾನರ್‌ಗೆ ಬೆಂಕಿ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ನಟಿ ಸರೋಜಾದೇವಿ ನಡುವಣ ಆತ್ಮೀಯ ಸಂಬಂಧದದ ಉಲ್ಲೇಖವಿರುವ ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಆತ್ಮಕಥನ 'ಹಳ್ಳಿ ಹಕ್ಕಿಯ ಹಾಡು' ಕೃತಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಆಕ್ರೋಶಗೊಂಡ ಕೃಷ್ಣ ಅಭಿಮಾನಿಗಳು ಸೋಮವಾರ ಸಂಜೆ ಪುಸ್ತಕ ಬಿಡುಗಡೆಗೆ ಅಡ್ಡಿಯನ್ನುಂಟು ಮಾಡಿದ್ದಾರೆ.

ಈ ಕೃತಿಯಲ್ಲಿದ್ದ 'ಎಸ್.ಎಂ.ಕೃಷ್ಣ ಹಾಗೂ ನಟಿ ಸರೋಜಾದೇವಿಯವರ ನಡುವೆ ಮಧುರ ಸಂಬಂಧವಿತ್ತು' ಎಂಬ ಅಂಶ ಸೋಮವಾರ ಬೆಳಗ್ಗಿನಿಂದಲೇ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ, ಕೃಷ್ಣ ಅವರ ಅಭಿಮಾನಿಗಳು ಮೈಸೂರು ನಗರದಾದ್ಯಂತ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ವಿಶ್ವನಾಥ್ ಪುಸ್ತಕ ಬಿಡುಗಡೆ ಬ್ಯಾನರುಗಳನ್ನು ಎತ್ತಿ ಎಸೆಯಲಾಯಿತು. ಮತ್ತೆ ಕೆಲವೆಡೆ ಬ್ಯಾನರುಗಳಿಗೆ ಬೆಂಕಿ ಇಟ್ಟ ಪ್ರಸಂಗಗಳು ನಡೆದಿವೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಘಟನೆಯನ್ನು ನಿಯಂತ್ರಿಸಲು ಹರಸಾಹಸ ಮಾಡಬೇಕಾಯಿತು. ಅದಕ್ಕೂ ಜಗ್ಗದ ಕೃಷ್ಣ ಬೆಂಬಲಿಗರ ಮೇಲೆ ಲಘು ಲಾಠಿ ಪ್ರಹಾರವನ್ನೂ ಮಾಡಲಾಯಿತು ಎಂದು ತಿಳಿದುಬಂದಿದೆ.

ಸ್ವತಃ ವಿಶ್ವನಾಥ್ ಅವರೇ ಹಿರಿಯ ಕಾಂಗ್ರೆಸ್ಸಿಗರಾಗಿದ್ದು, ಈ ರೀತಿ ಮಾಜಿ ಮುಖ್ಯಮಂತ್ರಿಗಳೂ, ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರೂ ಆಗಿರುವ ಎಸ್.ಎಂ.ಕೃಷ್ಣ ಅವರ ಕುರಿತು ಈ ರೀತಿ ಬರೆಯ ಬೇಕಾದ ಅಗತ್ಯವಿರಲಿಲ್ಲ ಎಂದು ಕೃಷ್ಣ ಅವರ ಸಹೋದರ ಎಸ್.ಎಂ.ಶಂಕರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ನಡುವೆ ಡಿ.ಕೆ.ಶಿವಕುಮಾರ್ ಅವರೂ, ವಿಶ್ವನಾಥ್ ಕುರಿತು ತೀವ್ರ ಆಕ್ರೋಶದ ಮಾತುಗಳನ್ನಾಡಿದ್ದು, ಕಾಂಗ್ರೆಸ್ ಪಕ್ಷದೊಳಗೆ ಮುಸುಕಿನ ಗುದ್ದಾಟಕ್ಕೆ ಈ ಪ್ರಕರಣ ನಾಂದಿಯಾಗಿದೆ.
ಮತ್ತಷ್ಟು
ಬೈಕ್ ಸವಾರನನ್ನು ಬೆದರಿಸಿ 10 ಲಕ್ಷ ರೂ. ಲೂಟಿ
ಹಳ್ಳಿ ಹಕ್ಕಿಯ ಹಾಡಿನಲ್ಲಿ ಕೃಷ್ಣ-ಸರೋಜಾದೇವಿ ಸಂಬಂಧ
ಹೈದ್ರಾಬಾದ್ ಸ್ಫೋಟದಲ್ಲಿ ದಾವಣಗೆರೆ ಉಗ್ರರ ಕೈ
ಉಡುಪಿ: ಅಷ್ಟಮಠಾಧೀಶರ ಮಹತ್ವದ ಸಭೆ ಇಂದು
ಕಲುಷಿತ ನೀರು: ಮಹಿಳೆ ಸಾವು, ಹಲವರು ಆಸ್ಪತ್ರೆಗೆ
ಗಿನ್ನಿಸ್ ದಾಖಲೆ ಸೇರಿದ 40 ಗಂಟೆ ಕೊಂಕಣಿ ಗಾಯನ