ವಿವಾದಕ್ಕೆ ಕಾರಣವಾಗಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಅವರ 'ಹಳ್ಳಿ ಹಕ್ಕಿಯ ಹಾಡು' ಆತ್ಮಕಥನದಿಂದಾಗಿ ಮೈಸೂರಿನಾದ್ಯಂತ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಮೈಸೂರು ಜಿಲ್ಲೆಯಾದ್ಯಂತ ವಿಶ್ವನಾಥ್ ವಿರುದ್ಧ ಭಾರೀ ಪ್ರತಿಭಟನೆ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಹುಟ್ಟೂರಾಗಿರುವ ಮದ್ದೂರಿನಲ್ಲೂ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿವೆ.
ಈ ನಡುವೆ, ಪುಸ್ತಕ ಬಿಡುಗಡೆ ಮಾಡಬೇಕಾಗಿದ್ದ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು. ಆರ್. ಅನಂತಮೂರ್ತಿಯವರನ್ನು ಪ್ರತಿಭಟನಾಕಾರರು ಪುಸ್ತಕ ಬಿಡುಗಡೆಗೆ ಹೋಗದಂತೆ ಅಡ್ಡಿಪಡಿಸಿದರು. ಪುಸ್ತಕ ಬಿಡುಗಡೆ ನಡೆಯಬೇಕಾಗಿದ್ದ ಸ್ಥಳದಲ್ಲಿ ಕೆಲ ವಿಶ್ವನಾಥ್ ಅಭಿಮಾನಿಗಳು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ಸಮಾರಂಭದಲ್ಲಿ ಭಾಗವಹಿಸಬೇಕಿದ್ದ ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿಲ್ಲ. ಈ ಮಧ್ಯೆ, ಪುಸ್ತಕದ ಕರ್ತ ಎಚ್. ವಿಶ್ವನಾಥ್ ಅವರೇ ಸಮಾರಂಭಕ್ಕೆ ಆಗಮಿಸದಿರುವುದು ಕುತೂಹಲಕ್ಕೆ ಎಡೆ ಮಾಡಿದೆ.
ಪುಸ್ತಕದಲ್ಲೇನಿತ್ತು?
|