21 ಸರಣಿ ಕೊಲೆ ಹಂತಕ ಚಂದ್ರಕಾಂತ್ ಶರ್ಮಾನನ್ನು ಸೋಮವಾರದಂದು ಪೊಲೀಸರು ಪಾಲಿಗ್ರಾಫಿ ಪರೀಕ್ಷೆಗೆ ಒಳಪಡಿಸಿದ್ದು, ಈತನಿಂದ ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.
ಚಂದ್ರಕಾಂತ್ ಇದುವರೆಗೆ ಮಾಡಿರುವ 21 ಕೊಲೆಗಳು ನಿಜವಾಗಿದ್ದೇ ಎಂಬುದನ್ನು ಅರಿಯುವ ನಿಟ್ಟಿನಲ್ಲಿ ಮಾಡಲಾದ ಪರೀಕ್ಷೆಯಲ್ಲಿ, ತಾನು ಕೊಲೆ ಮಾಡಿರುವುದು ಸತ್ಯ ಎಂದು ಆತ ಒಪ್ಪಿಕೊಂಡಿದ್ದಾನೆ.
ಈ ಮೊದಲು ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸುತ್ತಿದ್ದ ಸಂದರ್ಭದಲ್ಲಿ ಆತನು 2ಗಂಟೆಗಳ ಕಾಲ ಮೌನದಿಂದ ಇದ್ದು, ಬರೀ 10 ನಿಮಿಷ ಮಾತ್ರ ಮಾತನಾಡುತ್ತಿದ್ದನು. ಇದರಿಂದ ಆತನಲ್ಲಿ ಕೊಲೆಯ ಬಗ್ಗೆ ವಿಷಯ ಸಂಗ್ರಹಿಸಲು ಕಷ್ಟಸಾಧ್ಯವಾದ್ದರಿಂದ ಪೊಲೀಸರು ಚಂದ್ರಕಾಂತನನ್ನು ಈ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿತ್ತು.
ಇತ್ತೀಚೆಗೆ ಹತ್ಯೆಯಾದ ರಾಘವನ್ ಕೊಲೆಯ ಜಾಡು ಹಿಡಿದ ಪೊಲೀಸರಿಗೆ ಸಿಕ್ಕಿಬಿದ್ದ ಈ ಕೊಲೆಗಡುಕನ 21 ಕೊಲೆಗಳ ರಹಸ್ಯ ಬಯಲಾಗಿತ್ತು. ತನ್ನ ಕುಟುಂಬವನ್ನು ಜೊತೆ ಸೇರಿಸಿಕೊಂಡು ಈತ ರಾಘವನ್ ಕೊಲೆಯನ್ನು ಮಾಡಿದ್ದನು.
ಐಷಾರಾಮಿ ಜೀವನಕ್ಕೆ ಆಸೆ ಪಟ್ಟು ಕೊಲೆಯನ್ನು ವೃತ್ತಿಯನ್ನಾಗಿ ಆರಿಸಿಕೊಂಡಿರುವ ಈತ ಮುಂಬೈ, ಪುಣೆ, ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ಕೊಲೆ ಮಾಡಿದ್ದು, ಒಟ್ಟಾರೆಯಾಗಿ ಈತ ಈ ಮೂಲಕ 15 ಕೋಟಿ ರೂ. ವಂಚನೆ ಎಸಗಿದ್ದಾನೆ ಎಂಬ ಬಗ್ಗೆ ಮಾಹಿತಿ ದೊರೆತಿದೆ.
|