ಪರ್ಯಾಯೋತ್ಸವದ ಹಿನ್ನೆಲೆಯಲ್ಲಿ ಅಷ್ಟಮಠದ ಯತಿಗಳಲ್ಲಿ ಉಂಟಾಗಿದ್ದ ಅಸಮಾಧಾನ ನಿವಾರಣೆ ಕುರಿತು ಸೋಮವಾರ ತಡರಾತ್ರಿಯವರೆಗೆ ನಡೆದ ಸಂಧಾನ ಸಭೆಯಲ್ಲಿ ಯಾವುದೇ ಒಮ್ಮತ ಮೂಡದೆ ವಿಫಲವಾಗಿದೆ.
ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡಬಾರದೆಂಬ ಅಷ್ಟ ಮಠಗಳ ನಿರ್ಧಾರವನ್ನು ಪುತ್ತಿಗೆ ಶ್ರೀಗಳು ಒಪ್ಪಿಕೊಂಡಿರುವ ಬಗ್ಗೆ ಅಷ್ಟಮಠಗಳಲ್ಲಿ ಸಮಾಧಾನವಿದ್ದರೂ, ಸಂಧಾನ ಸಭೆಯಲ್ಲಿ ಈ ಬಗ್ಗೆ ಅಷ್ಟ ಮಠಗಳು ಒಮ್ಮತಕ್ಕೆ ಬರುವಲ್ಲಿ ವಿಫಲವಾಗಿದೆ.
ರಥಬೀದಿಯಲ್ಲಿನ ಕೃಷ್ಣಧಾಮದಲ್ಲಿನ ಶ್ರೀ ವಿದ್ಯಾಮಾನ್ಯ ತೀರ್ಥರು ದೇಹತ್ಯಾಗ ಮಾಡಿದ್ದ ಕೊಠಡಿಯಲ್ಲಿ ನಡೆದ ರಹಸ್ಯ ಸಭೆಯಲ್ಲಿ ಮಾತಿಗೆ ಆರಂಭಿಸಿದ ಪುತ್ತಿಗೆ ಶ್ರೀಗಳು, ತಾವು ಸರ್ವಜ್ಞ ಪೀಠವನ್ನೇರಿದರೂ ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡಲಿಲ್ಲ. ಈ ಬಗ್ಗೆ ಅಷ್ಟಮಠಗಳ ಯತಿಗಳೊಂದಿಗೆ ನಡೆದ ಲೌಕಿಕ ಒಪ್ಪಂದಕ್ಕೆ ಸಮ್ಮತಿಸಬೇಕು ಎಂದರು.
ಇದಕ್ಕೆ ಪೇಜಾವರ ಶ್ರೀಗಳು ಆಂಶಿಕವಾಗಿ ಒಪ್ಪಿಗೆ ಸೂಚಿಸಿದ್ದರೂ ಉಳಿದ ಮಠಗಳ ಯತಿಗಳು ಒಪ್ಪಿಗೆ ಸೂಚಿಸದ ಕಾರಣ ಮತ್ತೆ ಒಪ್ಪಂದ ಕಗ್ಗಂಟಾಗಿಯೇ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಸಭೆಯ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು, ಸಭೆಯಲ್ಲಿ ಯಾವುದೇ ನಿರ್ಣಯಗಳನ್ನು ಕೈಗೊಳ್ಳಲಾಗಲಿಲ್ಲ. ಈ ಬಗ್ಗೆ ಚರ್ಚೆ ಇನ್ನೂ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಹೇಳಿದರು.
|