ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಂತಿಬೇಧಿ ಹೆಚ್ಚಳ: ಕಾರಣ ಅರಿಯಲು ಜಲಮಂಡಳಿ ವಿಫಲ
ಕಲುಷಿತ ನೀರಿನ ಸೇವನೆಯಿಂದ ಭಾರತೀನಗರ ಪ್ರದೇಶದಲ್ಲಿ ಸುಮಾರು 250 ಜನರಿಗೆ ಅತಿಸಾರದ ಪ್ರಕರಣಗಳು ಕಂಡು ಬಂದಿದ್ದು, ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಲಮಂಡಳಿಯು ಕಳೆದ 20 ದಿನಗಳಿಂದಲೂ ಕಲುಷಿತ ನೀರನ್ನು ಈ ಪ್ರದೇಶಕ್ಕೆ ಬಿಡುಗಡೆ ಮಾಡುತ್ತಿದ್ದು, ಈ ಬಗ್ಗೆ ನಿವಾಸಿಗಳು ಮನವಿಯನ್ನು ಸಲ್ಲಿಸಿದರೂ ಸ್ಪಂದಿಸಿರಲಿಲ್ಲ. ಇದರ ಪರಿಣಾಮವಾಗಿ ಜನರು ವಾಂತಿ, ಆಮಶಂಕೆಯಂತಹ ರೋಗಗಳಿಗೆ ತುತ್ತಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಸ್ವಸ್ಥತೆಗೆ ಕಲುಷಿತ ನೀರೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದರೂ, ಈ ಬಗ್ಗೆ ಜಲಮಂಡಳಿ ಅಧಿಕಾರಿಗಳು ಯಾವುದೇ ನಿರ್ಧಾರವನ್ನು ಪ್ರಕಟಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಮುಖ್ಯವಾಗಿ ಕಲುಷಿತ ನೀರಿನ ಮೂಲ ಕಾರಣವನ್ನು ತಿಳಿಯುವಲ್ಲಿ ಜಲಮಂಡಳಿ ವಿಫಲವಾಗಿದೆ.

ಕಲುಷಿತ ನೀರಿನಿಂದಾಗಿ ರೇಖಾ ಎಂಬ ಮಹಿಳೆ ಮೃತಪಟ್ಟ ಘಟನೆಯ ಬಳಿಕ ಸಾರ್ವಜನಿಕರ ಆಕ್ರೋಶಕ್ಕೆ ಮಣಿದು ಜಲಮಂಡಳಿಯು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಸೆಂಟ್ರಲ್ ಸಬ್-ಡಿವಿಷನ್ ಸಹಾಯಕ ಎಂಜಿನಿಯರ್ ಕೆ.ಎಸ್. ರೇಣುಕುಮಾರ್ ಅವರನ್ನು ಅಮಾನತುಗೊಳಿಸಿದೆ.

ಅಲ್ಲದೆ, ಜಲಮಂಡಳಿಯು ಈ ಭಾಗದ 50 ಮ್ಯಾನ್ ಹೋಲ್‌ಗಳನ್ನು ಸ್ವಚ್ಛಗೊಳಿಸಿದ್ದು, ಪ್ರಸ್ತುತ ಕೊಳವೆ ಮೂಲಕ ನೀರಿನ ಸರಬರಾಜು ಸ್ಥಗಿತಗೊಳಿಸಿ ಭಾರತೀನಗರದ ಜನರಿಗೆ ಟ್ಯಾಂಕರ್ ಮೂಲಕ ನೀರಿನ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಉಡುಪಿ: ಒಮ್ಮತ ಮೂಡದ ಮಠಾಧೀಶರ ಸಭೆ
ಸರಣಿ ಕೊಲೆಗಳನ್ನು ಒಪ್ಪಿಕೊಂಡ ಕಿಲ್ಲರ್ ಚಂದ್ರಕಾಂತ್
'ಹಳ್ಳಿ ಹಕ್ಕಿ': ಯುಆರ್‌ಗೆ ತಡೆ, ಮೈಸೂರಲ್ಲಿ ಪ್ರತಿಭಟನೆ
'ಹಕ್ಕಿ ಹಾಡು' ಬಿಡುಗಡೆಗೆ ಅಡ್ಡಿ: ಬ್ಯಾನರ್‌ಗೆ ಬೆಂಕಿ
ಬೈಕ್ ಸವಾರನನ್ನು ಬೆದರಿಸಿ 10 ಲಕ್ಷ ರೂ. ಲೂಟಿ
ಹಳ್ಳಿ ಹಕ್ಕಿಯ ಹಾಡಿನಲ್ಲಿ ಕೃಷ್ಣ-ಸರೋಜಾದೇವಿ ಸಂಬಂಧ