ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೇಗ ನಿಯಂತ್ರಕ ಮುಂದಕ್ಕೆ: ಹೈಕೋರ್ಟ್ ತರಾಟೆ
ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯ ಆದೇಶವನ್ನು ಮುಂದೂಡಿರುವ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ವೇಗ ನಿಯಂತ್ರಕ ಕಡ್ಡಾಯ ಕುರಿತ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾ| ಬಿ.ಎಸ್. ಪಾಟೀಲ್ ಅವರಿದ್ದ ವಿಭಾಗೀಯ ಪೀಠವು, ಸ್ಪೀಡ್ ಗವರ್ನರ್ ಅಳವಡಿಕೆಯನ್ನು ಜಾರಿಗೆ ತರುವಂತೆ ಈ ಮೊದಲೇ ಆದೇಶ ಹೊರಡಿಸಿದ್ದರೂ ಈವರೆಗೆ ಸರ್ಕಾರವು ಜಾರಿಗೆ ಮಾಡದಿರಲು ಕಾರಣವೇನು? ಸರ್ಕಾರ ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಅವಮಾನಿಸಿದೆ ಎಂದು ಹೇಳಿದೆ.

ಸ್ಪೀಡ್ ಗವರ್ನರ್ ಅಳವಡಿಸದ ಹೊಸ ವಾಹನಗಳನ್ನು ನೋಂದಣಿ ಮಾಡದಂತೆ ಹೈಕೋರ್ಟ್ ಈ ಹಿಂದೆಯೇ ಆದೇಶ ನೀಡಿತ್ತು. ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಸುವುದು ಅವಶ್ಯಕವಾಗಿದೆ. ಆದರೆ ಹಳೇ ವಾಹನಗಳಿಗೆ ಅದನ್ನು ಅಳವಡಿಸಲು ಕಾಲಾವಕಾಶವನ್ನು ನೀಡಲಾಗಿತ್ತು. ಸರ್ಕಾರ ಹೈಕೋರ್ಟ್ ಆದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ವೇಗ ನಿಯಂತ್ರಕ ಅಳವಡಿಕೆಯನ್ನು ಮುಂದೂಡಿದೆ ಎಂದು ವಿಭಾಗೀಯ ಪೀಠ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಸ್ಪೀಡ್ ಗವರ್ನರ್ ಅಳವಡಿಕೆ ಕಡ್ಡಾಯವಾಗಬೇಕೆಂದು ಎಚ್ಎಎಲ್ ನಿವೃತ್ತ ಉದ್ಯೌಗಿ ವೈ.ಎನ್. ನಂಜಪ್ಪ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆಯಲ್ಲಿ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಕೆಯನ್ನು ಕಡ್ಡಾಯಗೊಳಿಸುವಂತೆ ಆದೇಶ ನೀಡಿತ್ತಾದರೂ ಖಾಸಗಿ ವಾಹನಗಳ ಪ್ರತಿಭಟನೆಯಿಂದ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯವನ್ನು ಸರ್ಕಾರ ಮುಂದೂಡಿತ್ತು.

ಅಳವಡಿಕೆಯನ್ನು ಕಡ್ಡಾಯಗೊಳಿಸುವಂತೆ ಹೈಕೋರ್ಟ್ ಈಗ ಪುನರುಚ್ಚರಿಸಿರುವುದೇ ಅಲ್ಲದೆ, ವೇಗ ನಿಯಂತ್ರಕ ಅಳವಡಿಕೆಯನ್ನು ಮುಂದೂಡಿರುವ ಬಗ್ಗೆ ಗುರುವಾರದಂದು ವಿವರಣೆ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿದೆ.
ಮತ್ತಷ್ಟು
ಚಿನ್ನಾಭರಣ ಲೂಟಿಕೋರ ಸಲೀಂ ಬಂಧನ
ವಿವಾದಿತ ಹಕ್ಕಿ ಪತ್ರಕರ್ತರ ಭವನದಲ್ಲಿ ಬಿಡುಗಡೆ
ವಾಂತಿಬೇಧಿ ಹೆಚ್ಚಳ: ಕಾರಣ ಅರಿಯಲು ಜಲಮಂಡಳಿ ವಿಫಲ
ಉಡುಪಿ: ಒಮ್ಮತ ಮೂಡದ ಮಠಾಧೀಶರ ಸಭೆ
ಸರಣಿ ಕೊಲೆಗಳನ್ನು ಒಪ್ಪಿಕೊಂಡ ಕಿಲ್ಲರ್ ಚಂದ್ರಕಾಂತ್
'ಹಳ್ಳಿ ಹಕ್ಕಿ': ಯುಆರ್‌ಗೆ ತಡೆ, ಮೈಸೂರಲ್ಲಿ ಪ್ರತಿಭಟನೆ