ಅಳಂದದಲ್ಲಿನ ಭೂಸನೂರು ಸಮೀಪದಲ್ಲಿರುವ ತೆರೆದ ಕೊಳವೆಬಾವಿಗೆ ಮಂಗಳವಾರ ಬೆಳಗ್ಗೆ 10ರ ಸುಮಾರಿಗೆ ಬಾಲಕನೊಬ್ಬ ಬಿದ್ದಿರುವ ಘಟನೆ ವರದಿಯಾಗಿದೆ.ಭೂಸನೂರಿನ ಸಮೀಪದಲ್ಲಿರುವ ಸಕ್ಕರೆ ಕಾರ್ಖಾನೆಯ ಬಳಿಯಲ್ಲಿದ್ದ ಕೊಳವೆ ಬಾವಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅದರಲ್ಲಿ ಸಿಲುಕಿರುವ ನವನಾಥ ಎಂಬ 6 ವರ್ಷದ ಬಾಲಕ ಸುಮಾರು 40 ಅಡಿ ಆಳದಲ್ಲಿ ಇದ್ದ ಹಗ್ಗವನ್ನು ಹಿಡಿದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಬಾಲಕನನ್ನು ರಕ್ಷಿಸುವ ಕಾರ್ಯ ಆರಂಭಗೊಂಡಿದ್ದು, ಸ್ಥಳಕ್ಕೆ ತಹಶೀಲ್ದಾರರು ಭೇಟಿ ನೀಡಿದ್ದಾರೆ. ರಕ್ಷಣಾ ಕಾಯಕರ್ತರಿಂದ ಸುರಂಗ ಕೊರೆಯುವ ಕೆಲಸ ಭರದಿಂದ ಸಾಗಿದೆ. ಹಿರಿಯ ಪೊಲೀಸರು, ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಬಾಲಕನಿಗೆ ಬೇಕಾದ ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಿದ್ದಾರೆ.
ಬಾಲಕ ಈಗಾಗಲೇ ಅಧಿಕಾರಿಗೊಂದಿಗೆ ಮಾತನಾಡುತ್ತಿದ್ದು, ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆತನಿಗೆ ಈಗಾಗಲೇ ಆಮ್ಲಜನಕನೀಡಲಾಗುತ್ತಿದ್ದು, ಯಾವುದೇ ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
|