ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ಹಳ್ಳಿ ಹಕ್ಕಿಯ ಹಾಡು' ವಿರುದ್ಧ ಕಾಂಗ್ರೆಸಿನಲ್ಲೇ ಅಪಸ್ವರ
ಮಾಜಿ ಸಚಿವ ಎಚ್.ವಿಶ್ವನಾಥ್ ಅವರ 'ಹಳ್ಳಿ ಹಕ್ಕಿಯ ಹಾಡು' ಕೃತಿಗೆ ಸಂಬಂಧಿಸಿ ಅವರ ಪಕ್ಷದಲ್ಲಿಯೇ ಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅವುಗಳಲ್ಲಿ ಹೆಚ್ಚಿನಂಶ ವಿಶ್ವನಾಥ್ ವಿರುದ್ಧವಾಗಿಯೇ ಇರುವುದು ಕಾಂಗ್ರೆಸಿನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.

ಇವುಗಳಲ್ಲಿ ಮುಖ್ಯವಾಗಿರುವುದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯೆ. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸ್ನೇಹದ ನೆಪದಲ್ಲಿ, ತಮ್ಮ ಆತ್ಮ ಕಥಾನಕದಲ್ಲಿ ಬೇರೆಯವರ ವಿಷಯವನ್ನು ವಿಶ್ವನಾಥ್ ಬರೆದು ಸುಸಂಸ್ಕೃತರು ನಾಚುವಂತೆ ಮಾಡಿದ್ದಾರೆ. ವಿಷಯವನ್ನು ತಿರುಚಿ ಬರೆದರೆ ತಮಗೆ ಮಹತ್ವ ಸಿಗುತ್ತದೆ ಎಂದು ವಿಶ್ವನಾಥ್ ಭಾವಿಸಿದ್ದರೆ ಅದು ಅವರ ಮೂರ್ಖತನ ಎಂದು ಉಗ್ರಪ್ಪ ಕಟುವಾಗಿ ಟೀಕಿಸಿದ್ದಾರೆ.

ಇದಕ್ಕೆ ಪೂರಕವಾಗಿ ಯುವ ಕಾಂಗ್ರೆಸ್ ಸಮಿತಿಯೂ ವಿಶ್ವನಾಥ್ ಕೃತಿಯನ್ನು ಖಂಡಿಸಿದ್ದು, ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವ ಕುರಿತೂ ಎಚ್ಚರಿಕೆ ನೀಡಿದೆ.

ಸಾರ್ವಜನಿಕ ಜೀವನದಲ್ಲಿರುವವರ ಕುರಿತಾಗಿ ಈ ತರಹದ ವಿಚಾರ ಮಂಡನೆ ವಿಶ್ವನಾಥ್ ಅವರಂಥವರಿಗೆ ಶೋಭೆ ತರುವುದಿಲ್ಲ. ಒಳ್ಳೆಯ ನಾಯಕರೂ ಆಗಿರುವ ವಿಶ್ವನಾಥ್ ಈ ವಿವಾದ ಮತ್ತಷ್ಟು ಚರ್ಚೆಗೆ ಎಡೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ ಯೋಜನಾಖಾತೆ ರಾಜ್ಯ ಸಚಿವ ಎಂ.ವಿ.ರಾಜಶೇಖರನ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇದರಲ್ಲಿ ಆಕ್ಷೇಪಾರ್ಹ ಅಂಶಗಳೇನೂ ಇಲ್ಲ ಎಂದು ಕೃತಿಕಾರ ಎಚ್.ವಿಶ್ವನಾಥ್ ಪ್ರತಿಪಾದಿಸಿದ್ದಾರೆ. ಸದರಿ ಕೃತಿಯ ಪ್ರತಿಯನ್ನು ಎಸ್.ಎಂ.ಕೃಷ್ಣ ಹಾಗೂ ಬಿ.ಸರೋಜಾದೇವಿಯವರಿಗೆ ಕಳಿಸಿಕೊಟ್ಟಿದ್ದು ಕೂಲಂಕಷವಾಗಿ ಅದನ್ನು ಓದಿದ ನಂತರ ಸೂಕ್ತ ನಿರ್ಧಾರ ತಳೆಯಲಿ ಎಂದಿರುವ ವಿಶ್ವನಾಥ್, ಈ ಕೃತಿಯನ್ನು ಇಂಗ್ಲಿಷಿಲ್ಲೂ ಸದ್ಯದಲ್ಲಿಯೇ ಹೊರತರಲಾಗುವುದು, ಕೃಷ್ಣರವರ ಕುರಿತು ಪ್ರಕಟಿಸಿರುವ ಅಂಶವನ್ನು ಕೃತಿಯಿಂದ ತೆಗೆದುಹಾಕುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ರಾಜ್ಯಕ್ಕೆ ಲಷ್ಕರ್ ಲಿಂಕ್: ಮಂಗಳೂರಿನಲ್ಲಿ ತನಿಖೆ
ಕೊಳವೆ ಬಾವಿಯೊಳಗೆ ಬಿದ್ದ ಬಾಲಕನ ರಕ್ಷಣೆ
ಅಂಡರ್ಪಾಸ್ ಎಲ್ಲಾ ಪರೀಕ್ಷೆಯಲ್ಲೂ ಪಾಸ್
ಕೊಳವೆ ಬಾವಿಗೆ ಬಿದ್ದ ಮತ್ತೊಬ್ಬ ಬಾಲಕ
ಬುಧವಾರ ಆಟೋದರದಲ್ಲಿ ಸ್ವಲ್ಪ ಏರಿಕೆ ಸಂಭವ
ವೇಗ ನಿಯಂತ್ರಕ ಮುಂದಕ್ಕೆ: ಹೈಕೋರ್ಟ್ ತರಾಟೆ