ಮಠದಲ್ಲಿ ಪೂಜೆ ಮಾಡುವುದನ್ನು ಬಿಟ್ಟು ಅಡ್ವಾಣಿ, ಅಟಲ್ ಜೊತೆ ಮಾತನಾಡುವ ಪೇಜಾವರ ಶ್ರೀಗಳು ರಾಜಕೀಯಕ್ಕೆ ಬರಲಿ ಎಂದು ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು ನೀಡಿದ ಹೇಳಿಕೆಯನ್ನು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ತೀಕ್ಷ್ಣವಾಗಿ ಖಂಡಿಸಿದ್ದಾರೆ.
ತಾವು ಬಿಜೆಪಿಯಾಗಲಿ ಉಳಿದ ಯಾವುದೇ ಪಕ್ಷದ ಜೊತೆಯಲ್ಲಿಯೂ ಗುರುತಿಸಿಕೊಂಡಿಲ್ಲ. ಅಟಲ್, ಅಡ್ವಾಣಿ ಜೊತೆ ಮಾತುಕತೆ ನಡೆಸಿದಂತೆ ಇಂದಿರಾ, ಸೋನಿಯಾಗಾಂಧಿ ಜೊತೆಯಲ್ಲೂ ಮಾತುಕತೆ ನಡೆಸಿರುವುದುಂಟು. ದೇವೇಗೌಡರ ಈ ಹೇಳಿಕೆ ಆಶ್ಚರ್ಯ ತಂದಿದೆ ಎಂದು ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ದೇಶದ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಾವು ಎಲ್ಲಾ ರಾಜಕೀಯ ನಾಯಕರ ಜೊತೆಯಲ್ಲಿಯೂ ಸಂಪರ್ಕವಿಟ್ಟುಕೊಂಡಿರುವುದು ನಿಜ. ಆದರೆ ಆ ಕಾರಣಕಾಗಿಯೇ ರಾಜಕೀಯ ಸೇರಬೇಕೆಂಬ ದೇವೇಗೌಡರ ಹೇಳಿಕೆ ನಿಜಕ್ಕೂ ವಿಷಾದ ತಂದಿದೆ ಎಂದು ಅವರು ಹೇಳಿದ್ದಾರೆ.
|