ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಮಲದ ಮಡಿಲಿಗೆ ಇನ್ನೊಂದು ದಳ
ಜೆಡಿಎಸ್‌ನಿಂದ ಹೊರಬಂದಿರುವ ಮಾಜಿ ಸಚಿವ ತಿಪ್ಪೇಸ್ವಾಮಿ ಇಂದು (ಬುಧವಾರ) ಬಿಜೆಪಿ ಸೇರಿದ್ದಾರೆ. ಈ ಮೂಲಕ ಬಿಜೆಪಿಯ ಕೀರೀಟಕ್ಕೆ ದಳದ ಇನ್ನೊಂದು ಗರಿ ಸೇರಿದಂತಾಗಿದೆ.

ಜೆಡಿಎಸ್ ಪಕ್ಷದ ಹಾಗೂ ಅದರ ನಾಯಕರ ಬಗ್ಗೆ ಅಸಮಾಧಾಗೊಂಡು ಕಳೆದ ತಿಂಗಳು 14ರಂದು ಜೆಡಿಎಸ್ ಪಕ್ಷ ತೊರೆದಿದ್ದ ತಿಪ್ಪೇಸ್ವಾಮಿ ತಮ್ಮ ಮುಂದಿನ ನೆಲೆಯ ಕುರಿತು ಸಾಕಷ್ಟು ಅಧ್ಯಯನ ನಡೆಸಿದ್ದರು. ಈಗ ತಮ್ಮ ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ನಡೆಸಿದ ನಂತರ ಬಿಜೆಪಿ ಸೇರಿದ್ದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಿಪ್ಪೇಸ್ವಾಮಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪರಿಶಿಷ್ಟ ಜಾತಿ ಹಾಗೂ ಪಂಗಡದ ಮುಖಂಡರು ಬಿಜೆಪಿಗೆ ಬಂದಿರುವುದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ವಿಜಯದ ಸೂಚನೆಯಾಗಿದೆ ಎಂದು ಹೇಳಿದರು.

ಈಗಾಗಲೇ ಮೈಸೂರು ವಲಯದಲ್ಲಿ ಪ್ರಾಬಲ್ಯ ಗಳಿಸಿರುವ ಜಿ.ಟಿ.ದೇವೇಗೌಡರವರು ಬಿಜೆಪಿ ಸೇರಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.
ಮತ್ತಷ್ಟು
ಪ್ರತ್ಯೇಕ ಅಪಘಾತಗಳಲ್ಲಿ 3 ಮಂದಿ ಸಾವು
ಪೇಜಾವರ ಬಗ್ಗೆ ಹೇಳಿಕೆ ನೀಡಿಲ್ಲ: ದತ್ತಾ
ಬೈಕ್ ಬಾಂಬ್ ತಯಾರಿ ನಿಪುಣರು ಈ ಶಂಕಿತ ಉಗ್ರರು
ಜಟಿಲಗೊಂಡ ಹಳ್ಳಿ ಹಕ್ಕಿಯ ಸಮಸ್ಯೆ
ದೇವೇಗೌಡರ ಹೇಳಿಕೆಗೆ ಪೇಜಾವರ ಶ್ರೀಗಳ ಖಂಡನೆ
'ಹಳ್ಳಿ ಹಕ್ಕಿಯ ಹಾಡು' ವಿರುದ್ಧ ಕಾಂಗ್ರೆಸಿನಲ್ಲೇ ಅಪಸ್ವರ