ವಿವಾದದ ಗೂಡಾಗಿರುವ ಮಾಜಿ ಸಚಿವ ಎಚ್. ವಿಶ್ವನಾಥ್ ಅವರ ಹಳ್ಳಿ ಹಕ್ಕಿಯ ಹಾಡು ಇದೀಗ ನ್ಯಾಯಾಲಯದ ಮೆಟ್ಟಿಲೇರಿದೆ.
ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ತಮ್ಮ ಜನಾಂಗದ ವಿರುದ್ಧ ಅವಹೇಳನಕಾರಿಯಾದ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಚರ್ಮ ಕೈಗಾರಿಕೆ ಮತ್ತು ಲಿಡ್ಕರ್ ಸರಬರಾಜು ಸಂಘವು ಇಲ್ಲಿನ ನ್ಯಾಯಾಲಯದಲ್ಲಿ ಜಾತಿ ನಿಂದನೆ ಮೊಕದ್ದಮೆಯನ್ನು ಹೂಡಿದೆ. ಪ್ರಕರಣವನ್ನು ದಾಖಲು ಮಾಡಿಕೊಂಡಿರುವ 3ನೇ ಹೆಚ್ಚುವರಿ ನ್ಯಾಯಾಲಯವು ವಿಚಾರಣೆಯನ್ನು ಫೆಬ್ರವರಿ 5ಕ್ಕೆ ಮುಂದೂಡಿದೆ.
ಎಚ್. ವಿಶ್ವನಾಥ್ ಅವರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರಗಳಲ್ಲಿ ಮೆಟ್ಟು ಹೊಲಿಯುವವರೇ ಆತ್ಮಕಥನಗಳನ್ನು ಬರೆಯುತ್ತಿದ್ದಾರೆ. ತಾನೇಕೆ ಬರೆಯಬಾರದು ಎಂದು ಹೇಳುವ ಮೂಲಕ ಚರ್ಮ ಕೈಗಾರಿಕೆ ಮತ್ತು ಲಿಡ್ಕರ್ ಸರಬರಾಜುದಾರರ ಕೆಂಗಣ್ಣಿಗೆ ಗುರಿಯಾಗಿದ್ದರು. ಈ ಕಾರಣಕ್ಕೆ ಸಂಘವು ನ್ಯಾಯಾಲಯದ ಮೋರೆ ಹೋಗಿದೆ.
ಹಳ್ಳಿ ಹಕ್ಕಿಯ ಹಾಡು ಬಿಡುಗಡೆಗೆ ಮೊದಲೇ ಎಸ್.ಎಂ.ಕೃಷ್ಣ-ಸರೋಜಾದೇವಿ ಗತಕಾಲದ ಸಂಬಂಧ ಪ್ರಸ್ತಾಪಿಸಿ ವಿವಾದ ಕಾಣಿಸಿಕೊಂಡಿದ್ದು, ಈಗ ಮತ್ತೆ ಇನ್ನೊಂದು ವಿವಾದಕ್ಕೆ ಸಿಲುಕಿರುವುದು ವಿಶ್ವನಾಥ್‌ಗೆಗೆ ತಲೆನೋವಾಗಿರುವುದಂತೂ ಸತ್ಯ.
|