ಶಂಕಿತ ಉಗ್ರ ಆಸೀಫ್ ವಿಚಾರಣೆಯನ್ನು ತೀವ್ರಗೊಳಿಸಿರುವ ಪೊಲೀಸರಿಗೆ ಕೆಲವು ಮಹತ್ವದ ದಾಖಲೆಗಳು ದೊರೆತಿದ್ದು, ತನ್ನೊಡನಿದ್ದ ಆರು ಸಹಚರರ ಹೆಸರನ್ನು ಆತ ಬಹಿರಂಗಗೊಳಿಸಿದ್ದಾನೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ನಾರಾಯಣ ನಡಮನಿಯವರ ನೇತೃತ್ವದಲ್ಲಿ ಆರು ತಾಸುಗಳ ಕಾಲ ನಡೆಸಲಾದ ವಿಚಾರಣೆಯಲ್ಲಿ ಆಸಿಫ್ ಈ ವಿಷಯವನ್ನು ತಿಳಿಸಿದ್ದು, ಆರು ಜನರ ಪತ್ತೆಗಾಗಿ ಕಾರ್ಯಾಚರಣೆ ಆರಂಭಗೊಂಡಿದೆ.
ಅಲ್ಲಾವುದ್ದೀನ್, ಮೊಹಮದ್ ಇಸ್ಮಾಯಿಲ್, ನಿಯಾಜ್ ಅಹ್ಮದ್, ಮೊಹಮದ್ ಹನೀಫ್, ಮೊಹಮದ್ ನಿಯಾಜ್ ಹಾಗೂ ಇರ್ಫಾನ್ ಇವರೇ ಆ ಆರು ಸಹಚರರಾಗಿದ್ದು, ಅವರೆಲ್ಲಾ ನಗರದಲ್ಲಿಯೇ ಬೀಡು ಬಿಟ್ಟಿರಬಹುದೆಂಬ ರಹಸ್ಯವನ್ನು ಆಸಿಫ್ ಪೊಲೀಸರಿಗೆ ತಿಳಿಸಿದ್ದಾನೆ.
ಈ ಆರು ಜನರ ಜೊತೆ ಕಿಮ್ಸ್ ಹಾಸ್ಟೆಲ್ ಕೋಣೆಯೊಂದರಲ್ಲಿ ಆಸಿಫ್ ಧಾರ್ಮಿಕ ಚಿಂತನೆ ನಡೆಸುತ್ತಿದ್ದ ಹಾಗೂ ಕುಖ್ಯಾತ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಭಾವಚಿತ್ರಕ್ಕೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
6 ಜನ ಸಹಚರರಲ್ಲಿ ಇಸ್ಮಾಯಿಲ್ ಹಾಗೂ ಇನ್ನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ.
|