ಸುಮಾರು ಏಳು ನೂರು ವರ್ಷಗಳ, ಹತ್ತು ಕೋಟಿ ರೂ ಮೌಲ್ಯದ ಲಕ್ಷ್ಮೀಯ ವಿಗ್ರಹವನ್ನು ಅನಧಿಕೃತವಾಗಿ ತಮ್ಮ ವಶದಲ್ಲಿ ಇಟ್ಟುಕೊಂಡಿದ್ದು ಮೂವರ ಆರೋಪಿಗಳನ್ನು ಬೆಳಗಾವಿಯ ಮಾರ್ಕೆಟ್ ಪೋಲಿಸರು ಬಂಧಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಜಿಲ್ಲಾ ಪೊಲೀಸ್ ವರಿಷ್ಠ ಹೇಮಂತ್ ನಿಂಬಾಳ್ಕರ್ ಅವರು ಆರೋಪಿಗಳು ತಿರುಚಿರಾಪಳ್ಳಿಯಿಂದ ಬೆಳಗಾವಿಗೆ ತರಲಾಗಿತ್ತು. ಇಲ್ಲಿಂದ ಮೂರ್ತಿಯನ್ನು ವಿದೇಶಕ್ಕೆ ಅಕ್ರಮವಾಗಿ ಕಳುಹಿಸಿಕೊಡುವ ಯೋಜನೆಯನ್ನು ಮೂರ್ತಿಗಳ್ಳರು ಹಾಕಿಕೊಂಡಿದ್ದರು ಎಂದು ಮಾಹಿತಿ ನೀಡಿದರು.
ಬಂಧಿತರನ್ನು ಅಸ್ಗರ್ ಅಲಿ ತಹಶಿಲ್ದಾರ್ (35), ಲಕ್ಷ್ಮಣ್. ಬಿ. ಕುರಿ (42) ಮತ್ತು ವಿಲಾಸ್ ಲಕ್ಷ್ಮಣ ಪಾಟೀಲ (45) ಎಂದು ಗುರುತಿಸಲಾಗಿದ್ದು. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಈರ್ವರನ್ನು ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಪ್ರಕರಣವನ್ನು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ.
|