ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಸೇರ್ಪಡೆಗೆ ಈಗ ಪ್ರಕಾಶ್ ಗಡುವು ಫೆ.14
ಸೂಕ್ತ ಪಕ್ಷ ಸೇರಲು ಮೀನ ಮೇಷ ಎಣಿಸುತ್ತಿರುವ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಕಾಂಗ್ರೆಸ್ ಸೇರ್ಪಡೆ ಪ್ರಕ್ರಿಯೆಗೆ ಇನ್ನೂ ಸಮಯ ಕೂಡಿ ಬಂದಿಲ್ಲ. ಆದರೆ ಅವರು 3ನೇ ತಾರೀಖಿನ ನಂತರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ಮಧ್ಯೆ, ಅವರನ್ನು ಮತ್ತೆ ಜೆಡಿಎಸ್‌ಗೆ ಕರೆತರುವ ಪ್ರಯತ್ನಗಳು ತೆರೆಮರೆಯಲ್ಲಿ ಸಾಗುತ್ತಿವೆ. ಇದನ್ನು ಅರಿತಿರುವ ಕಾಂಗ್ರೆಸ್, ಪ್ರಕಾಶ್‌ಗೆ ಹಸಿರು ನಿಶಾನೆ ತೋರಿಸಲು ಹಿಂದೇಟು ಹಾಕುತ್ತಿದೆ. ಈ ಕಾರಣದಿಂದಲೇ ಅವರ ಪಕ್ಷ ಸೇರ್ಪಡೆ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟೀಕರಿಸಿದ ಪ್ರಕಾಶ್, ಕಾಂಗ್ರೆಸ್ ಪಕ್ಷವನ್ನು ತಾವು ಸೇರುವುದರ ಕುರಿತು ಯಾವುದೇ ಊಹಾಪೋಹ ಬೇಡ. ಕಾಂಗ್ರೆಸ್ ಸೇರುವುದು ಖಚಿತ. ಈಗಾಗಲೇ ಪಕ್ಷದ ಕೇಂದ್ರ ಮತ್ತು ರಾಜ್ಯ ಮಟ್ಟದ ಮುಖಂಡರನ್ನು ಭೇಟಿಯಾಗಿ ಸಮಾಲೋಚನೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಈ ತಿಂಗಳ 14ರೊಳಗೆ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುವುದಾಗಿ ತಿಳಿಸಿದ ಪ್ರಕಾಶ್, ಒಂದು ವೇಳೆ ಸೋನಿಯಾರೊಂದಿಗಿನ ಭೇಟಿ ವಿಳಂಬವಾದರೆ ರಾಜ್ಯದ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪಕ್ಷ ಸೇರಿ ನಂತರ ಸೋನಿಯಾರನ್ನು ಭೇಟಿ ಮಾಡುವ ಕುರಿತೂ ಪರೀಶೀಲಿಸುತ್ತಿರುವುದಾಗಿ ತಿಳಿಸಿದರು.
ಮತ್ತಷ್ಟು
ಹತ್ತು ಕೋಟಿ ಮೌಲ್ಯದ ಮೂರ್ತಿಗಳ್ಳರ ಸೆರೆ
ಶಂಕಿತ ಉಗ್ರ ಆಸಿಫ್‌ಗೆ 6 ಸಹಚರರು, ಇಬ್ಬರು ವಶಕ್ಕೆ
ದಾವಣಗೆರೆ: ಭಾನುವಾರ ಕಾಂಗ್ರೆಸ್ ಜನಾಂದೋಲನ
ಬೆಂಗಳೂರಿನಲ್ಲಿ ರಾಷ್ಟ್ರಪತಿಗೆ ಆತ್ಮೀಯ ಸ್ವಾಗತ
ರಾಜ್ಯದ ಸುವರ್ಣ ರಥಕ್ಕೆ ನಾಳೆ ರಾಷ್ಟ್ರಪತಿ ಚಾಲನೆ
ಉಳ್ಳಾಲದಲ್ಲಿ ಉಗ್ರರ ಚಲನವಲನ: ವಿಚಾರಣೆಯಲ್ಲಿ ಬಹಿರಂಗ