ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಪತಿ ಭದ್ರತೆಗಾಗಿ ಕೋತಿಗಳಿಗೆ ಸೆರೆವಾಸ!
ರಾಷ್ಟ್ರಪತಿ ಆಗಮಿಸುತ್ತಿರುವುದರ ಹಿನ್ನೆಲೆಯಲ್ಲಿ ಹಂಪಿಯ ವಿರೂಪಾಕ್ಷ ದೇವಾಲಯದ ಸುತ್ತಮುತ್ತಲಿರುವ ಕೋತಿಗಳಿಗೆ ತಾತ್ಕಾಲಿಕ ಬಂಧನ ಯೋಗ!

ರಾಷ್ಟ್ರಪತಿ ಪ್ರತಿಭಾ ಪಾಟೀಲರು ನಾಳೆ (ಭಾನುವಾರ) ಹಂಪಿಯ ವಿರೂಪಾಕ್ಷ ದೇವಾಲಯಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ, ದೇವಾಲಯದ ಸುತ್ತಮುತ್ತ ಇರುವ ಕೋತಿಗಳಿಂದ ಏನೂ ಅಚಾತುರ್ಯ ಸಂಭವಿಸಬಾರದು ಎಂದು ಅವುಗಳನ್ನು ಹಿಡಿಯುವಂತೆ ಜಿಲ್ಲಾಧಿಕಾರಿ ಅರವಿಂದ ಶ್ರೀವಾಸ್ತವ ಅವರು ಅರಣ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ವಿಷಯ ಖ್ಯಾತ ಸಂಶೋಧಕ, ಸಾಹಿತಿ ಚಿದಾನಂದ ಮೂರ್ತಿಯವರಿಗೆ ಅಸಮಾಧಾನ ಉಂಟುಮಾಡಿದೆ.

ಇದಕ್ಕೆ ಸಂಬಂಧಿಸಿ ಬಳ್ಳಾರಿ ಜಿಲ್ಲಾಧಿಕಾರಿಯವರಿಗೆ ಫ್ಯಾಕ್ಸ್ ಕಳಿಸಿರುವ ಚಿದಾನಂದ ಮೂರ್ತಿ, ಮುಸ್ಲಿಂ ಉಗ್ರರಿಂದ ರಾಷ್ಟ್ರಪತಿಯವರ ಭದ್ರತೆಗೆ ಧಕ್ಕೆಯಿದೆಯೇ ವಿನಃ ಕೋತಿಗಳಿಂದಲ್ಲ. ಧೈರ್ಯವಿದ್ದರೆ ಉಗ್ರರನ್ನು ಹಿಡಿಯಿರಿ ಎಂದು ಫ್ಯಾಕ್ಸ್ ಸಂದೇಶದಲ್ಲಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿ ಸ್ಥಳೀಯ ಅರಣ್ಯ ವಲಯ ಸಂರಕ್ಷಣಾಧಿಕಾರಿಯವರು ಪ್ರತಿಕ್ರಿಯಿಸಿದ್ದು, ಜಿಲ್ಲಾಧಿಕಾರಿಯವರ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆಯೇ ವಿನಃ ಭಕ್ತರೂ ಸೇರಿದಂತೆ ಯಾರನ್ನೂ ಮನ ನೋಯಿಸಲು ಅಲ್ಲ. ರಾಷ್ಟ್ರಪತಿಯವರು ಮರಳಿದ ಒಂದು ಗಂಟೆಯೊಳಗಾಗಿ ಕೋತಿಗಳನ್ನು ದೇವಸ್ಥಾನದ ಪ್ರಾಂಗಣದೊಳಗೆ ಬಿಡಲಾಗುವುದು. ಅಲ್ಲಿಯವರೆಗೆ ಅವುಗಳಿಗೆ ಸಮರ್ಪಕ ಆಹಾರದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಮತ್ತಷ್ಟು
ರಾಜನಾಥ್ ಬೆಂಗಳೂರು ಭೇಟಿಗೆ ಚುರುಕಾಗುತ್ತಿರುವ ಬಿಜೆಪಿ
ಉಗ್ರರ ಕೆಂಗಣ್ಣು : ಕರಾವಳಿಯಲ್ಲಿ ಕಟ್ಟೆಚ್ಚರ
ಗುಲ್ವಾಡಿ, ಬೆಳಗೆರೆ ಸಹಿತ 29 ಮಂದಿಗೆ ಮಾಧ್ಯಮ ಪ್ರಶಸ್ತಿ
ಕಾಂಗ್ರೆಸ್ ಸೇರ್ಪಡೆಗೆ ಈಗ ಪ್ರಕಾಶ್ ಗಡುವು ಫೆ.14
ಹತ್ತು ಕೋಟಿ ಮೌಲ್ಯದ ಮೂರ್ತಿಗಳ್ಳರ ಸೆರೆ
ಶಂಕಿತ ಉಗ್ರ ಆಸಿಫ್‌ಗೆ 6 ಸಹಚರರು, ಇಬ್ಬರು ವಶಕ್ಕೆ