ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸುವರ್ಣ ರಥಕ್ಕೆ ವಾಟಾಳ್ ತಿರುಗೇಟು - ಎಮ್ಮೆ ರಥ!
ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ಶನಿವಾರ ಉದ್ಘಾಟನೆಗೊಂಡ ಸುವರ್ಣ ರಥ ರೈಲಿಗೆ ಮಾಜಿ ಶಾಸಕ ವಾಟಾಳ್ ನಾಗರಾಜ್ ಪ್ರತಿಭಟನೆ ವ್ಯಕ್ತಪಡಿಸಿದ್ದು ಎಮ್ಮೆ ಮೆರವಣಿಗೆಯ ಮೂಲಕ!

ಶಾಸಕರ ಭವನದಿಂದ ದೇವರಾಜ ಅರಸು ಪ್ರತಿಮೆಯವರೆಗೆ ಎಮ್ಮೆಯೊಂದನ್ನು ಎಳೆದು ತಂದ ವಾಟಾಳರು, ಈ ಸುವರ್ಣ ರಥ ಶ್ರೀಮಂತರಿಗೆ ಮಾತ್ರ ಸೀಮಿತವಾಗಿದೆ, ಬಡ ಪ್ರವಾಸಿಗರ ಪಾಲಿಗೆ ಅದು ಯಮದರ್ಶನವಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆಯೂ ಈ ಸಂದರ್ಭದಲ್ಲಿ ವಾಟಾಳ್ ನಾಗರಾಜ್ ಟೀಕೆಗೆ ಒಳಗಾಯಿತು. ನಾ.ಗೋಪಿ, ಎಂ.ಮೋಹನ್, ಚಿಕ್ಕೇಗೌಡ ಇವರೇ ಮೊದಲಾದ ವಾಟಾಳ್ ಪಕ್ಷದ ಕಾರ್ಯಕರ್ತರು ಈ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮತ್ತಷ್ಟು
ದೇಶೀ ಪ್ರವಾಸೋದ್ಯಮ ಉತ್ತೇಜನ ಅಗತ್ಯ: ರಾಷ್ಟ್ರಪತಿ
ಉಡುಪಿ: ಮೂಡದ ಒಮ್ಮತ, ಕೈಚೆಲ್ಲಿದ ಪೇಜಾವರ ಶ್ರೀ
ರಾಷ್ಟ್ರಪತಿ ಭದ್ರತೆಗಾಗಿ ಕೋತಿಗಳಿಗೆ ಸೆರೆವಾಸ!
ರಾಜನಾಥ್ ಬೆಂಗಳೂರು ಭೇಟಿಗೆ ಚುರುಕಾಗುತ್ತಿರುವ ಬಿಜೆಪಿ
ಉಗ್ರರ ಕೆಂಗಣ್ಣು : ಕರಾವಳಿಯಲ್ಲಿ ಕಟ್ಟೆಚ್ಚರ
ಗುಲ್ವಾಡಿ, ಬೆಳಗೆರೆ ಸಹಿತ 29 ಮಂದಿಗೆ ಮಾಧ್ಯಮ ಪ್ರಶಸ್ತಿ