ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿ ವಂಚನೆ ಶೀಘ್ರದಲ್ಲೇ ಬಹಿರಂಗಪಡಿಸುವೆ: ಕುಮಾರ
ತಮ್ಮ ಪಕ್ಷದ ಜೊತೆ ಸಮ್ಮಿಶ್ರ ಸರ್ಕಾರ ನಡೆಸಿದ ಅವಧಿಯಲ್ಲಿ ಬಿಜೆಪಿ ಮಾಡಿದ ಅನ್ಯಾಯಗಳನ್ನು ಸೂಕ್ತ ಸಮಯದಲ್ಲಿ ಬಹಿರಂಗಪಡಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡುತ್ತಿದ್ದ ಅವರು, ರೈತರು ಹಾಗೂ ಕಡುಬಡವರ ಉದ್ದಾರಕ್ಕೆ ಪ್ರಾಮುಖ್ಯತೆ ಕೊಡದೆ ಯಡಿಯೂರಪ್ಪನವರು ಕೇವಲ ನಿರ್ದಿಷ್ಟ ಮಠಗಳಿಗೆ 250 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದ್ದರ ಕುರಿತು ತರಾಟೆಗೆ ತೆಗೆದುಕೊಂಡರು.

ವೀರಶೈವರಿಗೆ ದೇವೇಗೌಡರ ಕುಟುಂಬ ಅಧಿಕಾರ ಹಸ್ತಾಂತರ ಮಾಡದೆ ಮೋಸ ಮಾಡಿದೆ ಎಂದು ಹೇಳುತ್ತಾ ವೀರಶೈವ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನವನ್ನು ಬಿಜೆಪಿ ಮಾಡಿತು. ಅಷ್ಟೇ ಅಲ್ಲದೆ ಜೆಡಿಎಸ್ ಮಾಡಿದ ಕೆಲಸವನ್ನು ತಾವೇ ಮಾಡಿದ್ದು ಎಂದೂ ಬಿಜೆಪಿ ಹೇಳಿಕೊಂಡಿತು ಎಂದು ಕುಮಾರಸ್ವಾಮಿ ಅರೋಪಿಸಿದರು.

ಜೆಡಿಎಸ್ ತಮಗೆ ಅಧಿಕಾರ ನೀಡಿಲ್ಲ ಎಂದು ಹೇಳಿಕೊಂಡು ಅನುಕಂಪ ಗಿಟ್ಟಿಸಲು ಬಿಜೆಪಿ ಪ್ರಯತ್ನ ಪಡುತ್ತಿದೆ. ಆದರೆ ಅದೆಲ್ಲಾ ಆಗುವ ಕೆಲಸವಲ್ಲ ಎಂದು ಕುಮಾರಸ್ವಾಮಿ ಗೇಲಿ ಮಾಡಿದರು.
ಮತ್ತಷ್ಟು
ಗುಲ್ಬರ್ಗದಲ್ಲಿ ಮತ್ತೊಮ್ಮೆ ಲೋಕಾಯುಕ್ತ ದಾಳಿ, ದಾಖಲೆ ವಶ
ಸುವರ್ಣ ರಥಕ್ಕೆ ವಾಟಾಳ್ ತಿರುಗೇಟು - ಎಮ್ಮೆ ರಥ!
ದೇಶೀ ಪ್ರವಾಸೋದ್ಯಮ ಉತ್ತೇಜನ ಅಗತ್ಯ: ರಾಷ್ಟ್ರಪತಿ
ಉಡುಪಿ: ಮೂಡದ ಒಮ್ಮತ, ಕೈಚೆಲ್ಲಿದ ಪೇಜಾವರ ಶ್ರೀ
ರಾಷ್ಟ್ರಪತಿ ಭದ್ರತೆಗಾಗಿ ಕೋತಿಗಳಿಗೆ ಸೆರೆವಾಸ!
ರಾಜನಾಥ್ ಬೆಂಗಳೂರು ಭೇಟಿಗೆ ಚುರುಕಾಗುತ್ತಿರುವ ಬಿಜೆಪಿ