ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರದಕ್ಷಿಣೆಗಾಗಿ ಮದುವೆ: ಸರಣಿ ವಂಚಕನ ಬಂಧನ
ಸುಮಾರು ಆರು ಜನ ಮಹಿಳೆಯರನ್ನು ವಂಚಿಸಿ ಮದುವೆಯಾಗಿ ವರದಕ್ಷಿಣೆಯೊಂದಿಗೆ ಪರಾರಿಯಾಗುತ್ತಿದ್ದ ಮಂಜುನಾಥ್ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ದೊಡ್ಡಬಳ್ಳಾಪುರದ ಸಾಸಲು ಹೋಬಳಿ ಚನ್ನವೀರನಹಳ್ಳಿಯ ರೂಪಶ್ರೀಯನ್ನು ಮದುವೆಯಾಗಿ ಆಕೆಯಿಂದ ಸುಮಾರು 3.25 ಲಕ್ಷರೂ. ಪಡೆದು ಪರಾರಿಯಾಗಿದ್ದಾನೆ. ಈ ಬಗ್ಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ನಗರದ ರೈಲ್ವೆ ನಿಲ್ದಾಣದಲ್ಲಿ ಈತನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಹಣಕ್ಕಾಗಿ ಮಂಜುನಾಥ್ ಆರು ಮದುವೆಗಳನ್ನು ಮಾಡಿರುವ ಘಟನೆ ವಿಚಾರಣೆ ಸಂದರ್ಭ ಬೆಳಕಿಗೆ ಬಂದಿತು.

ಮಂಜುನಾಥ್ ಆಲಿಯಾಸ್ ಪ್ರಸಾದ್ ಆಲಿಯಾಸ್ ಮಹೇಶ್ ಹೀಗೆ ಅನೇಕ ಹೆಸರುಗಳನ್ನಿಟ್ಟುಕೊಂಡಿರುವ ಈತ 5-6 ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಜನರನ್ನು ವಂಚಿಸುತ್ತಿದ್ದನು. ಶ್ರೀಮಂತ ಹೆಣ್ಣುಮಕ್ಕಳನ್ನು ಓಲೈಸಲು ತನ್ನ ಇ-ಮೇಲ್ ವಿಳಾಸ, ಕಂಪ್ಯೂಟರ್ ಜ್ಞಾನ ಕೂಡ ಪ್ರದರ್ಶಿಸುತ್ತಿದ್ದನು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ತಾನು ಚಲನಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ತನಗೆ ಕನ್ನಡ ಚಿತ್ರರಂಗದ ದಿಗ್ಗಜರ ಪರಿಚಯವಿದೆ. ಅವರ ಮೂಲಕ ನಿಮಗೂ ಸಿನಿಮಾ ಹಾಗೂ ಧಾರವಾಹಿಗಳಲ್ಲಿ ಪಾತ್ರ ಕೊಡಿಸುತ್ತೇನೆ ಎಂದು ಜನರನ್ನು ಮರುಳು ಮಾಡಿ ಕೆಲವು ಧಾರಾವಾಹಿಗಳಲ್ಲಿ ತಾನು ನಟಿಸಿದ್ದ ತುಣುಕುಗಳನ್ನು ತೋರಿಸಿ ವಂಚಿಸುತ್ತಿದ್ದನು.

ಬಿಎಸ್ಸಿ ಪದವೀಧರನಾದ ಈತ ಆಟೋಚಾಲನೆ, ವಾಹನ ಕೊಡಿಸುವ ಬ್ರೋಕರ್ ಕೆಲಸ ಹೀಗೆ ಹಲವು ಕೆಲಸಗಳನ್ನು ಮಾಡಿ ರೇಸ್‌ಗಾಗಿ ಹಣ ತೊಡಗಿಸಿಕೊಳ್ಳುತ್ತಿದ್ದ. ಆ ಚಾಳಿ ಮುಂದುವರಿಯುತ್ತಿದ್ದಂತೆ ಹಣಕ್ಕಾಗಿ ಈತ ಈ ವಂಚನೆಗೆ ತೊಡಗಿಸಿಕೊಂಡಿದ್ದ. ಈತನಿಗೆ ಈಗಾಗಲೇ ಎರಡು ಮಕ್ಕಳಿದ್ದಾರೆ ಎಂಬುದು ತನಿಖೆ ವೇಳೆ ಬಹಿರಂಗಗೊಂಡಿದೆ.
ಮತ್ತಷ್ಟು
ಬಂಧಿತ ಉಗ್ರರಿಗೆ ಮಂಪರು ಪರೀಕ್ಷೆ
ಕೇಂದ್ರದ ವೈಫಲ್ಯದಿಂದ ಭಯೋತ್ಪಾದಕರ ಸಂಖ್ಯೆ ಹೆಚ್ಚಳ: ರಾಜನಾಥ್
ಬಿಜೆಪಿ ವಂಚನೆ ಶೀಘ್ರದಲ್ಲೇ ಬಹಿರಂಗಪಡಿಸುವೆ: ಕುಮಾರ
ಗುಲ್ಬರ್ಗದಲ್ಲಿ ಮತ್ತೊಮ್ಮೆ ಲೋಕಾಯುಕ್ತ ದಾಳಿ, ದಾಖಲೆ ವಶ
ಸುವರ್ಣ ರಥಕ್ಕೆ ವಾಟಾಳ್ ತಿರುಗೇಟು - ಎಮ್ಮೆ ರಥ!
ದೇಶೀ ಪ್ರವಾಸೋದ್ಯಮ ಉತ್ತೇಜನ ಅಗತ್ಯ: ರಾಷ್ಟ್ರಪತಿ