ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂಪಿಯ ಶಿಲ್ಪಕಲಾ ವೈಭವಕ್ಕೆ ಮಾರುಹೋದ ರಾಷ್ಟ್ರಪತಿ
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಭಾನುವಾರ ಬೆರಗುಗಣ್ಣಿನಿಂದ ಹಂಪಿಯನ್ನು ವೀಕ್ಷಿಸಿದರು. ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕ್ಕತಿಯ ಪ್ರತಿಬಿಂಬದಂತಿದ್ದ ಹಂಪಿಯ ಶಿಲ್ಪಕಲಾ ವೈಭವಕ್ಕೆ ಮಾರು ಹೋದರು. ಉಗ್ರ ನರಸಿಂಹನ ವಿಗ್ರಹವನ್ನು ಮತ್ತೆ ಮತ್ತೆ ವೀಕ್ಷಿಸಿದರು. ಅಧಿಕಾರಿಗಳೊಂದಿಗೆ ಫೋಟೋ ಸೆಷನ್‌ನಲ್ಲಿ ಭಾಗವಹಿಸಿದರು.

ಕರ್ನಾಟಕದ ಶಿಲ್ಪ ಕಲಾವೈಭವ ಅದೆಷ್ಟು ಅದ್ದೂರಿಯಾಗಿದೆ ಎಂದು ಉದ್ಗಾರ ತೆಗೆದರು. ಇದರೊಂದಿಗೆ ಹಂಪಿಗೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಎಂಬ ಅಭಿದಾನಕ್ಕೆ ಪ್ರತಿಭಾ ಪಾಟೀಲ್ ಪಾತ್ರರಾದರು.

ಭಾನುವಾರ ಮಧ್ಯಾಹ್ನದ ವೇಳೆಗೆ ವಿಶೇಷ ವಿಮಾನದಲ್ಲಿ ಹಂಪಿಗೆ ಆಗಮಿಸಿದ ರಾಷ್ಟ್ರಪತಿಗಳು ಹಂಪಿಯ ವಿರೂಪಾಕ್ಷ ಸ್ವಾಮಿಯ ದರ್ಶನ ಪಡೆದರು. ದೇಗುಲದಲ್ಲಿ ರಾಷ್ಟ್ರಪತಿಯವರಿಗೆ ಶ್ವೇತವಸ್ತ್ರನೀಡಲಾಯಿತು.

ಇದಕ್ಕೂ ಮೊದಲು ರಾಷ್ಟ್ರಪತಿಯವರನ್ನು ಪೂರ್ಣ ಕುಂಭ ಸ್ವಾಗತದಲ್ಲಿ ಬರಮಾಡಿಕೊಳ್ಳಲಾಯಿತು. ರಾಷ್ಟ್ರಪತಿಗಳ ಭೇಟಿಯ ಹಿನ್ನೆಲೆಯಿಂದಾಗಿ ನೂರಕ್ಕೂ ಹೆಚ್ಚು ಮಾಧ್ಯಮಗಳು ಹಂಪಿಗೆ ಆಗಮಿಸಿದ್ದವು.

ರಾಷ್ಟ್ರಪತಿಗಳ ಭೇಟಿ ಹಿನ್ನೆಲೆಯಲ್ಲಿ ಹಂಪಿಯ ಪರಿಸರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಮತ್ತಷ್ಟು
ವರದಕ್ಷಿಣೆಗಾಗಿ ಮದುವೆ: ಸರಣಿ ವಂಚಕನ ಬಂಧನ
ಬಂಧಿತ ಉಗ್ರರಿಗೆ ಮಂಪರು ಪರೀಕ್ಷೆ
ಕೇಂದ್ರದ ವೈಫಲ್ಯದಿಂದ ಭಯೋತ್ಪಾದಕರ ಸಂಖ್ಯೆ ಹೆಚ್ಚಳ: ರಾಜನಾಥ್
ಬಿಜೆಪಿ ವಂಚನೆ ಶೀಘ್ರದಲ್ಲೇ ಬಹಿರಂಗಪಡಿಸುವೆ: ಕುಮಾರ
ಗುಲ್ಬರ್ಗದಲ್ಲಿ ಮತ್ತೊಮ್ಮೆ ಲೋಕಾಯುಕ್ತ ದಾಳಿ, ದಾಖಲೆ ವಶ
ಸುವರ್ಣ ರಥಕ್ಕೆ ವಾಟಾಳ್ ತಿರುಗೇಟು - ಎಮ್ಮೆ ರಥ!