ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಮಿ ಅಧ್ಯಕ್ಷನಾಗಿದ್ದ ವೈದ್ಯಕೀಯ ವಿದ್ಯಾರ್ಥಿ ಆಸಿಫ್
ಶಂಕಿತ ಉಗ್ರ ಆಸಿಫ್ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯಾದ ಸಿಮಿ ಅಧ್ಯಕ್ಷನಾಗಿದ್ದ ಎಂಬ ಆಘಾತಕಾರಿ ಅಂಶ ವಿಚಾರಣೆ ವೇಳೆ ಬಹಿರಂಗಗೊಂಡಿದೆ. ಈ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ತಯಾರಿ ನಡೆಸಿದ್ದನು ಎಂದು ತಿಳಿದು ಬಂದಿದೆ.

ಹೈದರಾಬಾದ್ ಮೂಲದ ರಿಯಾಜುದ್ದಿನ್ ಹಾಗೂ ಮಹಮದ್ ಗೌಸ್ ಸ್ನೇಹಿತನಾದ ಕಿಮ್ಸ್ ವಿದ್ಯಾರ್ಥಿ ಆಸಿಫ್, ಇಸ್ಲಾಮಿಕ್ ಡೆವಲಪ್‌ಮೆಂಟ್ ಬೋರ್ಡ್‌ನಿಂದ ಸಂಘಟನೆಗೆ ಬೇಕಾದ ಹಣಕಾಸು ನೆರವನ್ನು ಕೋರಿದ್ದನು ಎಂಬ ವಿಚಾರ ಬಹಿರಂಗಗೊಂಡಿದೆ.

ಆಸಿಫ್ ತನ್ನ ಮನೆಯಲ್ಲಿಟ್ಟುಕೊಂಡಿದ್ದ ಶಸ್ತ್ರಾಸ್ತ್ರಗಳನ್ನು ಸ್ನೇಹಿತರ ಮೂಲಕ ವಿಜಾಪುರಕ್ಕೆ ಸಾಗಿಸಿರಬಹುದೆಂಬ ಶಂಕೆ ಈಗ ಪೊಲೀಸರಿಗೆ ಕಾಡುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತೀವ್ರ ಶೋಧನೆ ಆರಂಭಿಸಿದ್ದಾರೆ.

ಈ ಸಂಬಂಧ ಸಿಓಡಿ ಪೊಲೀಸ್ ತಂಡ ಧಾರವಾಡಕ್ಕೆ ಆಗಮಿಸಿದ್ದು, ಆಸಿಫ್‌ನಿಂದ ಇನ್ನಷ್ಟು ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ತೀವ್ರ ವಿಚಾರಣೆಗೊಳಪಡಿಸಲು ನಿರ್ಧರಿಸಿದೆ.
ಮತ್ತಷ್ಟು
ಹಂಪಿಯ ಶಿಲ್ಪಕಲಾ ವೈಭವಕ್ಕೆ ಮಾರುಹೋದ ರಾಷ್ಟ್ರಪತಿ
ವರದಕ್ಷಿಣೆಗಾಗಿ ಮದುವೆ: ಸರಣಿ ವಂಚಕನ ಬಂಧನ
ಬಂಧಿತ ಉಗ್ರರಿಗೆ ಮಂಪರು ಪರೀಕ್ಷೆ
ಕೇಂದ್ರದ ವೈಫಲ್ಯದಿಂದ ಭಯೋತ್ಪಾದಕರ ಸಂಖ್ಯೆ ಹೆಚ್ಚಳ: ರಾಜನಾಥ್
ಬಿಜೆಪಿ ವಂಚನೆ ಶೀಘ್ರದಲ್ಲೇ ಬಹಿರಂಗಪಡಿಸುವೆ: ಕುಮಾರ
ಗುಲ್ಬರ್ಗದಲ್ಲಿ ಮತ್ತೊಮ್ಮೆ ಲೋಕಾಯುಕ್ತ ದಾಳಿ, ದಾಖಲೆ ವಶ