ಉಡುಪಿ ಅಷ್ಟಮಠದ ಯತಿಗಳು ಪುತ್ತಿಗೆ ಶ್ರೀಗಳ ಶ್ರೀಕೃಷ್ಣ ಪೂಜೆಗೆ ಒಪ್ಪಿಗೆ ಸೂಚಿಸುವ ಮೂಲಕ ಬಹಳ ದಿನಗಳಿಂದ ಜಟಿಲಗೊಂಡಿದ್ದ ಉಡುಪಿ ಪರ್ಯಾಯ ಸಮಸ್ಯೆ ಕೊನೆಗೂ ಪರಿಹಾರ ಕಂಡುಕೊಂಡಿದೆ.
ಪೇಜಾವರ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥರವರು ನೀಡಿದ್ದ ಸಲಹೆಯನ್ನು ಪುತ್ತಿಗೆ ಶ್ರೀಗಳು ಸ್ವೀಕರಿಸಿದ್ದರಿಂದ ತಾನು ಕೂಡ ಶ್ರೀಕೃಷ್ಣ ಪೂಜೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಶ್ರೀಕೃಷ್ಣನನ್ನು ಮುಟ್ಟಿ ಪೂಜೆ ಮಾಡಬಾರದೆಂಬ ಅಷ್ಟಮಠಗಳ ನಿರ್ಣಯಕ್ಕೆ ಪುತ್ತಿಗೆ ಶ್ರೀಗಳು ಒಪ್ಪಿಗೆ ಸೂಚಿಸಿರುವುದರಿಂದ ಪೇಜಾವರ ಶ್ರೀಗಳು ಸೇರಿದಂತೆ ಉಳಿದ ಅಷ್ಟಮಠಗಳ ಯತಿಗಳು ಈ ನಿರ್ಣಯವನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿತ್ತು.
ಈ ಹಿಂದೆ ಪುತ್ತಿಗೆ ಶ್ರೀಗಳಾದ ಸುಗುಣೇಂದ್ರ ತೀರ್ಥರು ವಿದೇಶ ಪ್ರವಾಸ ಮಾಡಿರುವುದರಿಂದ ಶ್ರೀಕೃಷ್ಣನ ಪೂಜೆಯನ್ನು ಮಾಡಬಾರದು. ಇದು ಅಷ್ಟಮಠಗಳ ನಿಯಮದ ಉಲ್ಲಂಘನೆಯಾಗಿದೆ ಎಂದು ವಿರೋಧಿಸಿದ್ದರು. ಈ ಸಂಬಂಧ ಅನೇಕ ಸುತ್ತಿನ ಮಾತುಕತೆಗಳು ನಡೆದಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
|