ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆಂದು ಆರೋಪಿಸಿ ಇನ್ಪೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿದೆ.
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರಿಂಕೋರ್ಟ್, ನಾರಾಯಣ ಮೂರ್ತಿಯವರ ವಿರುದ್ಧ ಹೂಡಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ. ಈ ಹಿಂದೆ ಇನ್ಪೋಸಿಸ್ ಕಾರ್ಯಕ್ರಮವೊಂದರಲ್ಲಿ ವಿದೇಶೀಯರಿಗೆ ಅವಮಾನವಾಗಬಾರದೆಂಬ ದೃಷ್ಟಿಯಿಂದ ರಾಷ್ಟ್ರಗೀತೆಯನ್ನು ಹಾಡುವುದರ ಬದಲಾಗಿ ವಾದ್ಯ ಸಂಗೀತದಲ್ಲಿ ನುಡಿಸಲಾಗಿತ್ತು. ಈ ಬಗ್ಗೆ ನಾರಾಯಣ ಮೂರ್ತಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದರೆಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
|