ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದ.ಭಾರತದೆಲ್ಲೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು
ಹೊನ್ನಾಳಿಯಲ್ಲಿ ಬಂಧಿಸಲಾಗಿರುವ ಉಗ್ರರು ಹಾಗೂ ಕಿಮ್ಸ್ ವಿದ್ಯಾರ್ಥಿ ಆಸಿಫ್ ವಿಚಾರಣೆಯ ವೇಳೆ ಮಹತ್ವದ ಸಂಗತಿಗಳು ಬಹಿರಂಗಗೊಂಡಿದ್ದು, ಗೋವಾ ಹಾಗೂ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಸ್ಪೋಟ ನಡೆಸಲು ಅವರು ಸಂಚು ರೂಪಿಸಿದ್ದರೆಂದು ತಳಿದು ಬಂದಿದೆ.

ದಕ್ಷಿಣ ಭಾರತದ ಸುಮಾರು 20 ಸ್ಥಳಗಳಲ್ಲಿ ವಿದ್ವಂಸಕ ಕೃತ್ಯವನ್ನು ಎಸಗುವ ಯೋಜನೆ ಹಾಕಿಕೊಂಡಿದ್ದರು. ದೇಶದಲ್ಲಿನ ಉಗ್ರಗಾಮಿ ಸಂಘಟನೆಗೆ ಅದ್ನಾನ್ ನಾಯಕತ್ವ ವಹಿಸಿದ್ದು, ಉಜ್ಜೈನಿಯಿಂದ ಶಸ್ತ್ರಾಸ್ತ್ರಗಳನ್ನು ತರಿಸಿದ್ದರು ಎನ್ನಲಾಗಿದೆ. ಜಾವೇದ್ ಎನ್ನುವ ಉಗ್ರಗಾಮಿ ಕೇರಳ ರಾಜ್ಯಕ್ಕೆ ನಾಯಕನಾಗಿದ್ದನು. ಇವರೆಲ್ಲರೂ ಗೋವಾ ರಸ್ತೆಯಲ್ಲಿನ ಕ್ಯಾಸಲ್ ರಾಕ್‌ನಲ್ಲಿ ಸಭೆ ಸೇರುತ್ತಿದ್ದು, ವಿಧ್ವಂಸಕ ಕೃತ್ಯದ ಬಗ್ಗೆ ಚರ್ಚೆ ನಡೆಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಉಗ್ರರು ಅಂತಾರಾಷ್ಟ್ರೀಯ ಭಯೋತ್ಪಾದಕ ಉಮರ್ ಮುಲ್ಲಾ ಅನುಯಾಯಿಗಳಾಗಿದ್ದು, ಒಬ್ಬ ಉಗ್ರನನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿದರೆ 10 ಲಕ್ಷ ರೂ. ಬಳುವಳಿಯಾಗಿ ನೀಡಲಾಗುತ್ತಿತ್ತು. ಈ ನಿಟ್ಟಿನಲ್ಲಿ ಅನೇಕ ಜನರನ್ನು ಭಯೋತ್ಪಾದಕರಾಗುವಂತೆ ಪ್ರೇರೇಪಿಸಲಾಗಿತ್ತು ಎಂದು ತಿಳಿದು ಬಂದಿದೆ. ಸ್ಫೋಟಕ ವಸ್ತುಗಳು ಹಾಗೂ ಸ್ಪೋಟಕಗಳನ್ನು ತಯಾರಿಸುವ ವಿಧಾನಗಳ ಬಗ್ಗೆ ಆಸಿಫ್‌ನ ಕೊಠಡಿಯಲ್ಲಿ ವಿವರಗಳು ದೊರೆತಿದ್ದು, ಶಸ್ತ್ರಾಸ್ತ್ರಗಳನ್ನು ಹುಡುಕುವ ಕಾರ್ಯ ಮುಂದುವರಿದಿದೆ.

ಈ ನಡುವೆ, ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯದ ಜೊತೆ ಸತತ ಸಂಪರ್ಕ ಮಾಡಿಕೊಂಡಿದ್ದು, ವಿವರಗಳನ್ನು ಪಡೆದುಕೊಂಡಿದೆ. ಶಂಕಿತ ಉಗ್ರರಿಂದ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಸಿಓಡಿ ವಶಕ್ಕೆ ಒಪ್ಪಿಸಲಾಗಿದ್ದು, ಫೆಬ್ರವರಿ 12 ರವರೆಗೆ ತನಿಖೆ ಮುಂದುವರಿಯಲಿದೆ.
ಮತ್ತಷ್ಟು
ನಾರಾಯಣ ಮೂರ್ತಿ ಮೇಲಿದ್ದ ಮೊಕದ್ದಮೆ ವಜಾ
ಆಂಧ್ರ ಬ್ಯಾಂಕ್‌ನಿಂದ ಹಗಲಲ್ಲೇ ಲಕ್ಷಾಂತರ ರೂ. ದರೋಡೆ
ಮರಕ್ಕೆ ಕೊಡಲಿ: ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ತಡೆ
ಉಡುಪಿ: ಪುತ್ತಿಗೆ ಶ್ರೀಗಳ ಪೂಜೆಗೆ ಅಷ್ಟಮಠ ಸಮ್ಮತಿ
ಬೆಂಗಳೂರಲ್ಲಿ 2ನೇ ಅತಿದೊಡ್ಡ ಶಿವನ ವಿಗ್ರಹ 10ರಂದು ಪ್ರತಿಷ್ಠಾಪನೆ
ಉಗ್ರರ ಕಾಶ್ಮೀರವಾಗುವತ್ತ ಕರ್ನಾಟಕ: ಮುತಾಲಿಕ್