ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಡ್ಯ ಸಮೀಪ ಬಸ್-ಲಾರಿ ಡಿಕ್ಕಿ: ಐವರು ಸಾವು
ನಾಗತಿಹಳ್ಳಿಯ ಸಮೀಪ ಮಂಗಳವಾರ ಬೆಳಗಿನ ಜಾವ ಬಸ್-ಲಾರಿ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 5 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಮಾರು 15 ಮಂದಿಗೆ ಗಾಯಗಳಾಗಿವೆ.

ಮೃತಪಟ್ಟವರಲ್ಲಿ ಒಂದು ಮಗು ಸೇರಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲವರಿಗೆ ಗಂಭೀರ ಗಾಯಗಾಳಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ.

ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಬಸ್, ನಿಂತಿದ್ದ ಮರಳು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು
ದ.ಭಾರತದೆಲ್ಲೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು
ನಾರಾಯಣ ಮೂರ್ತಿ ಮೇಲಿದ್ದ ಮೊಕದ್ದಮೆ ವಜಾ
ಆಂಧ್ರ ಬ್ಯಾಂಕ್‌ನಿಂದ ಹಗಲಲ್ಲೇ ಲಕ್ಷಾಂತರ ರೂ. ದರೋಡೆ
ಮರಕ್ಕೆ ಕೊಡಲಿ: ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ತಡೆ
ಉಡುಪಿ: ಪುತ್ತಿಗೆ ಶ್ರೀಗಳ ಪೂಜೆಗೆ ಅಷ್ಟಮಠ ಸಮ್ಮತಿ
ಬೆಂಗಳೂರಲ್ಲಿ 2ನೇ ಅತಿದೊಡ್ಡ ಶಿವನ ವಿಗ್ರಹ 10ರಂದು ಪ್ರತಿಷ್ಠಾಪನೆ