ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಲುಷಿತ ನೀರಿಗೆ ಬಾಲಕ ಬಲಿ: ಕಾಲರಾ ಭೀತಿ
ಭಾರತೀನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೊಬ್ಬ ಬಾಲಕ ಬಲಿಯಾಗಿದ್ದು, ಕಾಲರಾ ಭೀತಿ ಕಾಣಿಸಿಕೊಂಡಿದೆ. ಇದರಿಂದ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದಾರೆ.

ಭಾರತೀನಗರದ ಕರಣ್ ಎಂಬ ಬಾಲಕ ಕಳೆದ ಒಂದು ತಿಂಗಳಿಂದ ನೀರು ಕುಡಿದು ವಾಂತಿ ಬೇಧಿಯಿಂದ ಬಳಲುತ್ತಿದ್ದು, ಭಾನುವಾರ ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದ್ದಾನೆ. ಅಲ್ಲದೆ, ಕಾಲರಾದಿಂದ ಸುಮಾರು ಆರು ಜನರು ಬಳಲುತ್ತಿರುವುದು ದೃಢಪಟ್ಟಿದೆ.

ಈ ಬಗ್ಗೆ ಸ್ಥಳೀಯ ನಿವಾಸಿಗಳು ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಲಿಕೆ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ ಎಂದಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ನೀಡುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ.

ಕಲುಷಿತ ನೀರು ಕುಡಿದು ಈಗಾಗಲೇ ಸಾಕಷ್ಟು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲವು ಜನರಿಗೆ ಕಾಲರಾ ಭೀತಿ ಎದುರಾಗಿದೆ. ಈ ಮಧ್ಯೆ ಪಾಲಿಕೆಯು ಸುಮಾರು ಆರು ಕಡೆಗಳಲ್ಲಿನ ನೀರನ್ನು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ.
ಮತ್ತಷ್ಟು
ಮಂಡ್ಯ ಸಮೀಪ ಬಸ್-ಲಾರಿ ಡಿಕ್ಕಿ: ಐವರು ಸಾವು
ದ.ಭಾರತದೆಲ್ಲೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು
ನಾರಾಯಣ ಮೂರ್ತಿ ಮೇಲಿದ್ದ ಮೊಕದ್ದಮೆ ವಜಾ
ಆಂಧ್ರ ಬ್ಯಾಂಕ್‌ನಿಂದ ಹಗಲಲ್ಲೇ ಲಕ್ಷಾಂತರ ರೂ. ದರೋಡೆ
ಮರಕ್ಕೆ ಕೊಡಲಿ: ಮೆಟ್ರೋ ಕಾಮಗಾರಿಗೆ ಹೈಕೋರ್ಟ್ ತಡೆ
ಉಡುಪಿ: ಪುತ್ತಿಗೆ ಶ್ರೀಗಳ ಪೂಜೆಗೆ ಅಷ್ಟಮಠ ಸಮ್ಮತಿ