ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕ್ಷುಲ್ಲಕ ವಿವಾದ : ಒರ್ವ ಸಾವು
ಕನಕಪುರದಲ್ಲಿ ಕ್ಷುಲಕ ಕಾರಣಕ್ಕಾಗಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಒರ್ವ ಮೃತಪಟ್ಟಿದ್ದರಿಂದ ಪರಿಸ್ಥಿತಿ ಇಂದು (ಮಂಗಳವಾರ) ವಿಕೋಪಕ್ಕೆ ತಿರುಗಿದೆ.

ಸಣ್ಣ ಕಾರಣಕ್ಕಾಗಿ ಆರಂಭವಾದ ಘರ್ಷಣೆಯಲ್ಲಿ ನಿನ್ನೆ ರಾತ್ರಿ ಸಲೀಂ ಎಂಬುವನನ್ನು ಚಾಕುವಿನಿಂದ ಗಾಯಗೊಳಿಸಲಾಗಿತ್ತು. ಆತನನ್ನು ಆಸ್ಪತ್ರೆಗೆ ಸೇರಿಸಿದರೂ ಇಂದು(ಮಂಗಳವಾರ) ಬೆಳಿಗ್ಗೆ ಆತ ಮೃತಪಟ್ಟಿದ್ದನು. ಇದರಿಂದ ಘರ್ಷಣೆ ಮತ್ತೆ ಭುಗಿಲೆದ್ದಿದೆ.

ತಿಲಕ್‌ನಗರ ಮತ್ತು ಅಜೀಜ್‌ ನಗರದಲ್ಲಿ ಉದ್ರಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕ್ರಿಕೆಟ್ ಆಟದಲ್ಲಿ ನಡೆದ ಸಣ್ಣ ಕಾರಣಕ್ಕಾಗಿ ಆರಂಭವಾದ ಜಗಳದಿಂದ ಸಲೀಂಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಎರಡು ಗುಂಪುಗಳ ನಡುವೆ ಸಂಧಾನವನ್ನು ಏರ್ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಆದರೆ ಗಾಯಗೊಂಡ ಸಲೀಂ ಮೃತಪಟ್ಟಿದ್ದರಿಂದ ಪರಿಸ್ಥಿತಿ ತೀವ್ರ ಸ್ವರೂಪವನ್ನು ಪಡೆದುಕೊಂಡಿತ್ತು ಎನ್ನಲಾಗಿದೆ.
ಮತ್ತಷ್ಟು
ಬಿಜೆಪಿ : ಜನಜಾಗ್ರತಿ ಸಮಾವೇಶ
ಕಲುಷಿತ ನೀರಿಗೆ ಬಾಲಕ ಬಲಿ: ಕಾಲರಾ ಭೀತಿ
ಮಂಡ್ಯ ಸಮೀಪ ಬಸ್-ಲಾರಿ ಡಿಕ್ಕಿ: ಐವರು ಸಾವು
ದ.ಭಾರತದೆಲ್ಲೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದ ಉಗ್ರರು
ನಾರಾಯಣ ಮೂರ್ತಿ ಮೇಲಿದ್ದ ಮೊಕದ್ದಮೆ ವಜಾ
ಆಂಧ್ರ ಬ್ಯಾಂಕ್‌ನಿಂದ ಹಗಲಲ್ಲೇ ಲಕ್ಷಾಂತರ ರೂ. ದರೋಡೆ