ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೇಶ್ಯವಾಟಿಕೆ ಜಾಲದ ದಂಪತಿ ಬಂಧನ
ದೆಹಲಿ ಮಹಿಳೆಯೊಬ್ಬಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಟಕ್ ವೈಶ್ಯವಾಟಿಕೆ ಜಾಲದ ದಂಪತಿಗಳನ್ನು ಬಂಧಿಸುವಲ್ಲಿ ಹೆಚ್.ಎ.ಎಲ್. ಠಾಣೆಯ ಪೊಲೀಸರು ಇಂದು ಯಶಸ್ವಿಯಾಗಿದ್ದಾರೆ.

ಬಸವೇಶ್ವರನಗರದ ನಿವಾಸಿ ಸಂದೀಪ್ ಹಾಗೂ ಆತನ ಪತ್ನಿ ಸುಪ್ರಿಯಾ, ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಡಿಸಿಪಿ ಸೌಮೇಂದ್ರ ಮುಖರ್ಜಿ ತಿಳಿಸಿದ್ದಾರೆ. ಅಲ್ಲದೆ, 2000 ಸಾಲಿನಲ್ಲಿ ನಡೆದ ಎಸ್ಟೀಮ್ ಲತಾ ಕೊಲೆ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ದೆಹಲಿ ಮೂಲದ ಮಹಿಳೆಯೊಂದಿಗೆ ವೇಶ್ಯವಾಟಿಕೆ ವ್ಯವಹಾರದಲ್ಲಿ ತೊಡಗಿದ್ದ ಸಂದೀಪ್, ಆಕೆಯೊಂದಿಗೆ ದೂರವಾಣಿ ಮೂಲಕ ಸುಮಾರು 600 ಕರೆಗಳನ್ನು ಮಾಡಿದ್ದಾನೆ. ವ್ಯವಹಾರದ ಮಾತುಕತೆಯಂತೆ ಆಕೆಗೆ ಕೊಡಬೇಕಾದ 25 ಸಾವಿರಗಳನ್ನು ನೀಡದೆ ಇದ್ದುದರಿಂದ ಆಕೆ ಪೊಲೀಸರಿಗೆ ದೂರು ನೀಡಿದ್ದಳು.

ಆದರೆ ಕಳೆದ ಡಿಸೆಂಬರ್ 5ರಂದು ಆಕೆ ನಗರಕ್ಕೆ ಬಂಧಿದ್ದ ಸಂದರ್ಭದಲ್ಲಿ ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವನ್ನು ಮಾಡಲಾಗಿತ್ತು. ಈ ಬಗ್ಗೆ ಆಕೆ ದೂರು ನೀಡಿದ್ದಳು. ಆದರೆ ಬಳಿಕ ಆಕೆ ವಕೀಲರ ಮೂಲಕ ಕೇಸನ್ನು ಮತ್ತೆ ಹಿಂತೆಗೆದುಕೊಂಡಿದ್ದಳು. ಈಗ ಆಕೆಯ ಬಂಧನಕ್ಕೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮತ್ತಷ್ಟು
ಅಭಿವೃದ್ದಿಗೆ ಕಾಂಗ್ರೆಸ್ ಅಡ್ಡಿ :ಆಶೋಕ್
ಕಾಂಗ್ರೆಸ್ ಭಿನ್ನಮತ ಸ್ಪೋಟ:
ಕ್ಷುಲ್ಲಕ ವಿವಾದ : ಒರ್ವ ಸಾವು
ಬಿಜೆಪಿ : ಜನಜಾಗ್ರತಿ ಸಮಾವೇಶ
ಕಲುಷಿತ ನೀರಿಗೆ ಬಾಲಕ ಬಲಿ: ಕಾಲರಾ ಭೀತಿ
ಮಂಡ್ಯ ಸಮೀಪ ಬಸ್-ಲಾರಿ ಡಿಕ್ಕಿ: ಐವರು ಸಾವು