ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜಕೀಯ ರಂಗಪ್ರವೇಶಕ್ಕೆ ಎನ್‌ಸಿಪಿ ಸಜ್ಜು
ಮಾರ್ಚ್‌ನಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸುವ ಮೂಲಕ ರಾಷ್ಟ್ತ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ರಾಜ್ಯ ರಾಜಕೀಯ ರಂಗಪ್ರವೇಶ ಮಾಡಲಿದೆ ಎಂದು ಎನ್ಸಿಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವಹಿಸಿರುವ ರಾಜೇಶ್ವರ್ ತಿಳಿಸಿದ್ದಾರೆ.

ಈ ಸಮಾವೇಶದಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಕೃಷಿ ಸಚಿವ ಶರದ್‌ಪವಾರ್ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಕರ್ನಾಟಕದಲ್ಲಿ ಯಾವುದೇ ಪಕ್ಷಗಳು ಅಧಿಕಾರ ಪಡೆಯುವಲ್ಲಿ ವಿಫಲವಾಗಿರುವ ಈ ಸಂದರ್ಭದಲ್ಲಿ ಹೊಸ ಪಕ್ಷಗಳಿಗೆ ಬೇರೂರಲು ಅವಕಾಶವಿದೆ. ಈ ವಾತಾವರಣವನ್ನು ತಮ್ಮ ಪಕ್ಷ ಸೂಕ್ತವಾಗಿ ಬಳಸಿಕೊಳ್ಳಲಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದೇ ಮುಖ್ಯ ಗುರಿಯಲ್ಲ ಬದಲಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷವನ್ನು ಬಲಪಡಿಸಿ, ಕನಿಷ್ಟ ಒರ್ವ ಶಾಸಕನನ್ನು ಗೆಲ್ಲಿಸುವುದೇ ಮುಖ್ಯ ಗುರಿ. ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಡಲು ಜಾತ್ಯಾತೀತ ಪಕ್ಷಗಳೊಂದಿಗೆ ಮೈತ್ರಿ ಮಾಡಲು ಎನ್‌ಸಿಪಿ ಸಿದ್ದವಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಬಂಧಿತ ಉಗ್ರರ ಗುರು ಅದ್ನಾನ್‌ಗೆ ವ್ಯಾಪಕ ಶೋಧ
ವೇಶ್ಯವಾಟಿಕೆ ಜಾಲದ ದಂಪತಿ ಬಂಧನ
ಅಭಿವೃದ್ದಿಗೆ ಕಾಂಗ್ರೆಸ್ ಅಡ್ಡಿ :ಆಶೋಕ್
ಕಾಂಗ್ರೆಸ್ ಭಿನ್ನಮತ ಸ್ಪೋಟ:
ಕ್ಷುಲ್ಲಕ ವಿವಾದ : ಒರ್ವ ಸಾವು
ಬಿಜೆಪಿ : ಜನಜಾಗ್ರತಿ ಸಮಾವೇಶ