ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೆಹಲಿಗೆ ತೆರಳಿದ ಪ್ರಕಾಶ್
ಸೋನಿಯಾ ಜೊತೆ ಮಾತುಕತೆ ಸಂಭವ
ಕಾಂಗ್ರೆಸ್‌ನತ್ತ ಒಲವು ತೋರಿರುವ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಇಂದು (ಬುಧವಾರ) ಬೆಳಿಗ್ಗೆ ದೆಹಲಿಗೆ ಪ್ರಯಾಣಿಸಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲಿದ್ದಾರೆ.

ಭೇಟಿಯ ಸಂದರ್ಭದಲ್ಲಿ ರಾಜ್ಯದ ಉಸ್ತುವಾರಿ ವಹಿಸಿರುವ ಪೃಥ್ವಿರಾಜ್ ಚೌಹಾಣ್, ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಅನೇಕ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಬಳಿಕ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ನಿಂದ ಹೊರಬಂದಿರುವ ಎಂ.ಪಿ. ಪ್ರಕಾಶ್ ತಮ್ಮ ಬಣದೊಂದಿಗೆ ಇದುವರೆಗೂ ಯಾವುದೇ ಪಕ್ಷವನ್ನು ಅಧಿಕೃತವಾಗಿ ಸೇರದೆ ಇರುವುದರಿಂದ ಕಾಂಗ್ರೆಸ್ ಪಾಳಯದಲ್ಲಿ ಕಸರತ್ತು ಪ್ರಾರಂಭಗೊಂಡಿದೆ. ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಂ.ಪಿ. ಪ್ರಕಾಶ್‌ರನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ರೂಪಿಸಿದೆ ಎಂದು ತಿಳಿದು ಬಂದಿದೆ.

ಈ ಮಧ್ಯೆ ಜನವರಿ 27ರಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಿಗರ ಜೊತೆಯಲ್ಲಿ ಎಂ.ಪಿ.ಪ್ರಕಾಶ್ ಅಧಿಕೃತವಾಗಿ ಸೇರಲಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಹೇಳಿದ್ದರೂ, ಆ ಸಂದರ್ಭದಲ್ಲಿ ಎಂ.ಪಿ. ಪ್ರಕಾಶ್ ತಮ್ಮ ನಿರ್ಧಾರವನ್ನು ಮುಂದೂಡಿದ್ದರು. ಈಗ ಮತ್ತೆ ಪಕ್ಷ ಸೇರುವ ಕುರಿತು ಮಾತುಕತೆಗೆ ಪ್ರಕಾಶ್ ಮುಂದಾಗಿರುವುದರಿಂದ ಕಾಂಗ್ರೆಸ್ ಸೇರುವುದು ಖಚಿತವಾದಂತಾಗಿದೆ.
ಮತ್ತಷ್ಟು
ರಾಜಕೀಯ ರಂಗಪ್ರವೇಶಕ್ಕೆ ಎನ್‌ಸಿಪಿ ಸಜ್ಜು
ಬಂಧಿತ ಉಗ್ರರ ಗುರು ಅದ್ನಾನ್‌ಗೆ ವ್ಯಾಪಕ ಶೋಧ
ವೇಶ್ಯವಾಟಿಕೆ ಜಾಲದ ದಂಪತಿ ಬಂಧನ
ಅಭಿವೃದ್ದಿಗೆ ಕಾಂಗ್ರೆಸ್ ಅಡ್ಡಿ :ಆಶೋಕ್
ಕಾಂಗ್ರೆಸ್ ಭಿನ್ನಮತ ಸ್ಪೋಟ:
ಕ್ಷುಲ್ಲಕ ವಿವಾದ : ಒರ್ವ ಸಾವು