ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
51 ಲಕ್ಷ ನಕಲಿ ಮತದಾರರು: ಅಂತಿಮ ಪಟ್ಟಿ ವಿಳಂಬ
ಮತದಾರರ ಪಟ್ಟಿ ಪರಿಷ್ಕರಣೆಯು ನಾಳೆ (ಗುರುವಾರ) ಪ್ರಕಟಿಸಬೇಕಿದ್ದು, ಸುಮಾರು 51 ಲಕ್ಷ ನಕಲಿ ಮತದಾರರು ಹೆಸರು ಕಂಡು ಬಂದಿರುವುದರಿಂದ ಅಂತಿಮ ಪಟ್ಟಿ ಮಾರ್ಚ್ 10ರಂದು ಹೊರಬೀಳಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ನಕಲಿ ಮತದಾರರ ಹೆಸರುಗಳು ಅಧಿಕಗೊಂಡಿರುವುದರಿಂದ ಪರಿಷ್ಕರಣೆ ಕಾರ್ಯದಲ್ಲಿ ವಿಳಂಬವಾಗಿದೆ. ಪ್ರಸ್ತುತ ಪರಿಷ್ಕರಣೆ ಕಾರ್ಯ ಪ್ರಗತಿಯಲ್ಲಿದ್ದು, ಅಂತಿಮ ಪಟ್ಟಿ ಈ ತಿಂಗಳ ಫೆಬ್ರವರಿ 14ರಂದು ಬಿಡುಗಡೆಗೊಳ್ಳಲಿದೆ. ಅಲ್ಲದೆ, ಮಾರ್ಚ್ 10ರಂದು ಪರಿಷ್ಕರಣೆ ಪೂರ್ಣಗೊಂಡು ಅಂತಿಮ ಪಟ್ಟಿ ಸಿದ್ದಗೊಳ್ಳಲಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ನಗರವೊಂದರಲ್ಲಿಯೇ ಸುಮಾರು 4ಲಕ್ಷ ನಕಲಿ ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಹಾಗೆಯೇ ಚಾಮರಾಜನಗರ ನಕಲಿ ಮತದಾರರ ಸಂಖ್ಯೆಯಲ್ಲಿ ಕೊನೆಯ ಸ್ಥಾನದಲ್ಲಿದೆ. ಅಲ್ಲದೆ, 21 ಲಕ್ಷ ಮತದಾರರನ್ನು ಸೇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ಬಂಧಿತ ಉಗ್ರರಿಗೆ ತಾಲಿಬಾನ್ ಸಂಪರ್ಕ!
ವಿ.ವಿ. ಸಿಂಡಿಕೇಟ್‌‌ ಹೊರರಾಜ್ಯದ ನೇಮಕ: ವಿರೋಧ
ದೆಹಲಿಗೆ ತೆರಳಿದ ಪ್ರಕಾಶ್
ರಾಜಕೀಯ ರಂಗಪ್ರವೇಶಕ್ಕೆ ಎನ್‌ಸಿಪಿ ಸಜ್ಜು
ಬಂಧಿತ ಉಗ್ರರ ಗುರು ಅದ್ನಾನ್‌ಗೆ ವ್ಯಾಪಕ ಶೋಧ
ವೇಶ್ಯವಾಟಿಕೆ ಜಾಲದ ದಂಪತಿ ಬಂಧನ