'ಹಳ್ಳಿ ಹಕ್ಕಿಯ ಹಾಡು' ಕೃತಿಯಲ್ಲಿ ದಲಿತರನ್ನು ಅವಮಾನ ಮಾಡಲಾಗಿದೆ ಎಂದು ಆರೋಪ ಮಾಡಿರುವುದು ರಾಜಕೀಯ ಪ್ರೇರಿತ ಎಂದು ಕೃತಿಕಾರ, ಮಾಜಿ ಸಚಿವ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ಕೃತಿಯ ಬಗ್ಗೆ ಸಮಾರಂಭವೊಂದರಲ್ಲಿ ಮಾತನಾಡುವಾಗ ಯಾವ ಜನಾಂಗದ ಮೇಲೆಯೂ ಅಪಮಾನವಾಗುವಂತಹ ಹೇಳಿಕೆಯನ್ನು ನೀಡಿಲ್ಲ. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದ್ದು, ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಚಿಕ್ಕ ವಯಸ್ಸಿನಲ್ಲಿಯೇ ಆತ್ಮಕಥೆಯನ್ನು ಬರೆಯುವವರು ಮಹಾರಾಷ್ಟ್ರದಲ್ಲಿಯೂ ಇದ್ದಾರೆ. ಅಲ್ಲಿನ ಮೋಚಿ ಜನಾಂಗದವರು ಬರೆದ ಆತ್ಮಕಥೆ ಜನಪ್ರಿಯವಾಗಿದೆ. ಕೃತಿ ಬರೆಯಲು ವಯಸ್ಸು ಮುಖ್ಯವಲ್ಲ, ಏನು ಬರೆದಿದ್ದಾರೆ ಎಂಬುದು ಮುಖ್ಯ ಎಂದು ವಿಶ್ವನಾಥ್ ತಿಳಿಸಿದರು.
ತಾನು ಬರೆದಿರುವ ಆತ್ಮಕಥೆಯಲ್ಲಿ ಯಾರನ್ನೂ ಗುರಿಯಾಗಿಟ್ಟುಕೊಂಡು ಬರೆದಿಲ್ಲ. ಆದರೆ ಈ ಕೃತಿಯನ್ನು ವಿನಾ ಕಾರಣ ರಾಜಕೀಯಕ್ಕೆ ಎಳೆತಂದುಬಣ್ಣ ಹಚ್ಚುವುದು ಸರಿಯಲ್ಲ ಎಂದು ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
|