ವಿದ್ಯುತ್ ಗುತ್ತಿಗೆದಾರನೊಬ್ಬನನ್ನು ಹಗ್ಗದಿಂದ ಬಿಗಿದು ಕೊಲೆಗೈದಿರುವ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಸಂದ್ರದ ಸಮೀಪ ನಡೆದಿದೆ.
ಎ. ನಾರಾಯಣ ಎಂಬಾತನನ್ನು ಬೆಂಗಳೂರು ಮೈಸೂರು ಹೆದ್ದಾರಿಯ ಮೈಲಸಂದ್ರದ ಐರಾವತ ಹೋಟೆಲ್ ಬಳಿ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಎಸೆಯಲಾಗಿದೆ.
ಬ್ಯಾಟರಾಯನಪುರ -ಮುನೇಶ್ವರಬ್ಲಾಕ್ ಆವಲಹಳ್ಳಿ ಗ್ರಾಮದ ನಾರಾಯಣಪ್ಪ ಎಂಬುವರ ಪುತ್ರನಾದ ನಾರಾಯಣ ಬುಧವಾರ ರಾತ್ರಿ ಕೆಂಗೇರಿ ಬಳಿ ಇರುವ ರಾಜೇಂದ್ರ ಪ್ರಸಾದ್ ಎಂಬವರ ಮನೆಗೆ ವಿದ್ಯುತ್ ಸಂಪರ್ಕ ಅಳವಡಿಕೆಗೆಂದು ಹೋಗಿದ್ದರು. ಆದರೆ ಆತ ಇಂದು ಬೆಳಿಗ್ಗೆ ಐರಾವತ ಹೊಟೇಲ್ ಸಮೀಪ ಬರ್ಬರವಾಗಿ ಕೊಲೆಯಾಗಿ ಬಿದಿದ್ದರೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಈತನ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ತೀವ್ರ ತನಿಖೆ ಆರಂಭಿಸಿದ್ದಾರೆ.
|