ಇದೇ ತಿಂಗಳ 18ರಿಂದ 21ರವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ನಗರಗಳಲ್ಲಿ ಚಿಲ್ಡ್ರನ್ ಇಂಡಿಯಾ ಸಂಸ್ಥೆಯು ರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ನಡೆಸಲಿದೆ.
ಬೆಂಗಳೂರು, ದಾವಣಗೆರೆ, ಮಂಗಳೂರು ಮತ್ತು ಹಾಸನದಲ್ಲಿ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ವಿವಿಧ ಭಾಷೆಗಳ ಸುಮಾರು 30 ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ನಾಲ್ಕು ದಿನಗಳವರೆಗೆ ನಡೆಯುವ ಈ ಚಿತ್ರೋತ್ಸವದಲ್ಲಿ ಚಿತ್ರಗಳಿಗೆ ಉಚಿತ ಪ್ರವೇಶವಿದ್ದು, 18ರಂದು ನಗರದ ಅಂಬೇಡ್ಕರ್ ಭವನದಲ್ಲಿ ಉದ್ಘಾಟನೆಯಾಗಲಿದೆ ಮತ್ತು 21ರಂದು ಹಾಸನದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.
ಮುಂದಿನ ವರ್ಷದಿಂದ ಜನವರಿ ತಿಂಗಳಿನಲ್ಲೇ ಚಿತ್ರೋತ್ಸವ ನಡೆಸಲು ಚಿಲ್ಡ್ರನ್ ಇಂಡಿಯಾ ಸಂಸ್ಥೆ ತೀರ್ಮಾನಿಸಿದ್ದು, ಬೆಂಗಳೂರಿನಲ್ಲಿನ ಈ ಬಾರಿಯ ಪ್ರದರ್ಶನಕ್ಕೆ ನವರಂಗ್, ಪಲ್ಲವಿ, ಪೂರ್ಣಿಮಾ ಹಾಗೂ ಬಾಲಭವನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
|