ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೆಡಿಎಸ್ ಸೇರಲು ನಾಣಯ್ಯ ಸಜ್ಜು?
ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಜಾತ್ಯಾತೀತ ಜನತಾದಳವನ್ನು ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎಂಬ ಊಹಾಪೋಹಗಳು ಹರಡಿವೆ.


ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವಾಸ್ತವವಾಗಿ ಜನತಾ ಪರಿವಾರದವರಾದ ತಾವು ಇದುವರೆಗೂ ತಟಸ್ಥರಾಗಿದ್ದು ಈಗ ಸೂಕ್ತ ನಿರ್ಧಾರವನ್ನು ಕೈಗೊಳ್ಳುವ ಸಮಯ ಬಂದಿದೆ ಎಂದಿದ್ದಾರೆ. ಫೆಬ್ರವರಿ 9ರಂದು ಮಡಿಕೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು.

ಚುನಾವಣೆಯ ರಂಗು ಕಾವೇರುತ್ತಿರುವ ಹಿನ್ನೆಲೆಯಲ್ಲಿ ಮುಖಂಡರನ್ನು ತಂತಮ್ಮ ಪಕ್ಷಕ್ಕೆ ಸೆಳೆಯುವ ಸರ್ಕಸ್ ಎಲ್ಲಾ ಪಕ್ಷಗಳಲ್ಲೂ ನಡೆಯುತ್ತಿದ್ದು, ದಕ್ಷ ಹಾಗೂ ನೇರನುಡಿಯ ರಾಜಕಾರಣಿ ಎಂದೇ ಹೆಸರಾಗಿರುವ ನಾಣಯ್ಯ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಹಬ್ಬಿದ್ದವು.

ಈಗಾಗಲೇ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೊಂದಿಗೆ ನಾಣಯ್ಯನವರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದ್ದು, ಫೆಬ್ರವರಿ 16ರಂದು ಮಡಿಕೇರಿಯಲ್ಲಿ ನಡೆಯಲಿರುವ ಜೆಡಿಎಸ್ ಸಮಾವೇಶದಲ್ಲಿ ಈ ಕುರಿತು ಅವರಿಂದ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.
ಮತ್ತಷ್ಟು
ಫೆ. 18-21: ರಾಜ್ಯದಲ್ಲಿ ಮಕ್ಕಳ ಚಿತ್ರೋತ್ಸವ
ವಿದ್ಯುತ್ ಗುತ್ತಿಗೆದಾರನ ನಿಗೂಢ ಕೊಲೆ
ಜನಪರ ಕಾರ್ಯಗಳಿಗೆ ಆದ್ಯತೆ: ಸುಧಾಕರ ರಾವ್
ಕಾಂಗ್ರೆಸ್ ಬಲವರ್ಧನೆಗೆ ಕೃಷ್ಣ ಅಗತ್ಯ: ಅಲ್ಲಂ
ಜೆಡಿಎಸ್ ಉಭಯ ಬಣದ ಸಭೆಗೆ ದೇವೇಗೌಡ ಹಾಜರು!
ಆತ್ಮಕಥೆ ಅಪಪ್ರಚಾರ ರಾಜಕೀಯ ಪ್ರೇರಿತ: ವಿಶ್ವನಾಥ್