ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ಬ್ರೈನ್ ಮ್ಯಾಪಿಂಗ್; ಅಪಾರ ಸ್ಫೋಟಕ ವಶ
ಬಂಧಿತ ಉಗ್ರಗಾಮಿ, ಕಿಮ್ಸ್ ವಿದ್ಯಾರ್ಥಿ ಆಸಿಫ್‌ನಿಂದ ಬಯಲಾದ ಮಾಹಿತಿ ಬೆನ್ನಟ್ಟಿರುವ ಪೊಲೀಸರಿಗೆ ಧಾರವಾಡ ಜಿಲ್ಲೆಯ ಗಡಿಭಾಗದ ಹಳ್ಳಿಗೇರಿ ಕ್ರಾಸ್‌ನಲ್ಲಿ ಅಡಗಿಸಿಟ್ಟಿದ್ದ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳು ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಆಸಿಫ್‌ನನ್ನು ಕೂಡ ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದು, ಇನ್ನೆರಡು ದಿನಗಳಲ್ಲಿ ಈತನನ್ನು ಬೆಂಗಳೂರಿಗೆ ಕರೆತರುವ ನಿರೀಕ್ಷೆಯಿದೆ.

ಈ ನಡುವೆ, ಶಂಕಿತ ಉಗ್ರರಾದ ಅಸಾದುಲ್ಲಾ ಹಾಗೂ ಮಹಮದ್ ಗೌಸ್ರ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ನಡೆಸಲಾಗಿದ್ದು, ಶುಕ್ರವಾರ ಮಂಪರು ಪರೀಕ್ಷೆ ನಡೆಸಲು ಸಿಓಡಿ ನಿರ್ಧರಿಸಿದೆ.

ಕೋರಮಂಗಲದ ವಿಧಿ ವಿಜ್ಞಾನ ಪ್ರಯೋಗಾಲದಲ್ಲಿ ನಡೆಸಲಾದ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಗುರುವಾರ ರಾತ್ರಿ ಸುಮಾರು 11ರ ಹೊತ್ತಿಗೆ ಮುಗಿದಿದ್ದು, ಮಹತ್ವದ ಸುಳಿವುಗಳು ಪತ್ತೆಯಾಗಿವೆ. ಇದಕ್ಕೂ ಮೊದಲು ಉಗ್ರರನ್ನು ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ಮಾಡಲಾಯಿತು ಎಂದು ತಿಳಿದು ಬಂದಿದೆ.

ತನಿಖೆಯಿಂದ ಬಹಿರಂಗಗೊಂಡಿರುವ ಮಾಹಿತಿಯ ಪ್ರಕಾರ, ಮಸೀದಿ ಹಾಗೂ ಹಿಂದೂಗಳ ದೇವಸ್ಥಾನಗಳನ್ನು ಸ್ಪೋಟಿಸುವ ಮೂಲಕ ಪರಸ್ಪರ ದ್ವೇಷದ ಭಾವನೆಗಳನ್ನು ಬಿತ್ತುವ ಕಾರ್ಯವನ್ನು ಉಗ್ರರು ಯೋಜಿಸಿದ್ದರು. ಹಾಗೆಯೇ ಉಗ್ರರು ಗೋವಾ ಹಾಗೂ ರಾಜ್ಯದ ಅನೇಕ ಭಾಗಗಳಲ್ಲಿ ಸ್ಪೋಟ ನಡೆಸುವ ಹುನ್ನಾರದ ಜೊತೆಯಲ್ಲಿ ಮುಗ್ದ ಜನರನ್ನು ಭಯೋತ್ಪಾದನೆಯತ್ತ ಎಳೆಯುವ ಬಗ್ಗೆ ಉಗ್ರರು ಯೋಜನೆಯನ್ನು ರೂಪಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತಷ್ಟು
ಜೆಡಿಎಸ್ ಸೇರಲು ನಾಣಯ್ಯ ಸಜ್ಜು?
ಫೆ. 18-21: ರಾಜ್ಯದಲ್ಲಿ ಮಕ್ಕಳ ಚಿತ್ರೋತ್ಸವ
ವಿದ್ಯುತ್ ಗುತ್ತಿಗೆದಾರನ ನಿಗೂಢ ಕೊಲೆ
ಜನಪರ ಕಾರ್ಯಗಳಿಗೆ ಆದ್ಯತೆ: ಸುಧಾಕರ ರಾವ್
ಕಾಂಗ್ರೆಸ್ ಬಲವರ್ಧನೆಗೆ ಕೃಷ್ಣ ಅಗತ್ಯ: ಅಲ್ಲಂ
ಜೆಡಿಎಸ್ ಉಭಯ ಬಣದ ಸಭೆಗೆ ದೇವೇಗೌಡ ಹಾಜರು!