ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಳ್ಳನಾದ ಮಾಜಿ ಪೊಲೀಸ್!
ವಾಹನ ಕಳ್ಳತನಕ್ಕಿಳಿದಿದ್ದ ಮಾಜಿ ಪೊಲೀಸ್ ಒಬ್ಬ ಶುಕ್ರವಾರ ಅಶೋಕನಗರದ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಮೂಲತಃ ಬೆಂಗಳೂರಿನಾದ ಈತ ದುಬೈನಲ್ಲಿ ಪೊಲೀಸ್ ವೃತ್ತಿ ಹೊಂದಿದ್ದ. ಆದರೆ ತನ್ನ ಸ್ನೇಹಿತ ತೀರಿದನೆಂದು ಕೆಲಸ ಬಿಟ್ಟು ಬೆಂಗಳೂರಿಗೆ ತನ್ನ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬಂದ. ನಗರದಲ್ಲಿ ನೆಲೆಯೂರಿದ ಈತ ಜೀವನಾಧಾರಕ್ಕಾಗಿ ಕಳ್ಳತನ ವೃತ್ತಿ ಆಯ್ದುಕೊಂಡಿದ್ದ. ಆದಷ್ಟು ಬೇಗ ಐಷಾರಾಮಿ ಜೀವನವನ್ನು ಆರಂಭಿಸಬೇಕೆಂಬ ದುರಾಲೋಚನೆಯಲ್ಲಿ ವಾಹನಗಳ ಕಳ್ಳತನಕ್ಕೆ ಮುಂದಾದ ಈತನಿಗೆ, ಈ ಸಾಹಸ ಕಾರ್ಯಕ್ಕೆ ಆತನ ಪತ್ನಿಯೂ ಸಹಕರಿಸಿದ್ದಳು.

44 ವರ್ಷ ಪ್ರಾಯದ ಈತ ಸುಮಾರು ಆರುತಿಂಗಳಿಂದ ಈ ಕೆಲಸಕ್ಕೆ ತೊಡಗಿದ್ದಾನೆ. ಹೀಗೆ ತನ್ನ ಪತ್ನಿಯ ಸಹಾಯದೊಂದಿಗೆ ನಡೆಸಿರುವ ಕಳ್ಳತನದಲ್ಲಿ 20ಲಕ್ಷ ರೂಪಾಯಿ ಮೌಲ್ಯದ ವಾಹನಗಳು ಈಗ ಪೊಲೀಸರ ವಶದಲ್ಲಿದೆ.

ದುಬೈನಲ್ಲಿ ಸುಮಾರು 9 ವರ್ಷಗಳ ಪೊಲೀಸ್ ವೃತ್ತಿ ಅನುಭವವನ್ನು ಪಡೆದಿರುವ ಈತ ಇಲ್ಲೂ ತಾನು ಪೊಲೀಸ್ ವೇಷಧಾರಿಯಾಗಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತನ್ನ ಕಾರ್ಯವನ್ನು ಸಾಧಿಸುತ್ತಿದ್ದ. ವಾಹನಗಳು ರಿಪೇರಿಗೆಂದು ಬರುವ ಸಂದರ್ಭಗಳನ್ನು ಆರಿಸಿಕೊಂಡು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತಷ್ಟು
ಸುಧಾಕರ್ ನೇಮಕ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ
ಕಾಂಗ್ರೆಸ್ 'ಕೈಯೊಳಗೆ' ಪ್ರಕಾಶ್
'ಶುಭ ನುಡಿದ ಶಕುನದ ಹಕ್ಕಿ' ಹಾರಿಹೋಯಿತು
ಬೊಮ್ಮಾಯಿ ಪುತ್ರ ಸಹಿತ ಹಲವರು ಬಿಜೆಪಿಯತ್ತ
ಕನ್ನಡಿಗರ ಪ್ರತಿಭಟನೆ: ಮಹಿಳಾ ವಿವಿಗೆ ಆಂಧ್ರ ಶಾಸಕಿ ನೇಮಕ ಹಿಂದಕ್ಕೆ
ಉಗ್ರರ ಬ್ರೈನ್ ಮ್ಯಾಪಿಂಗ್; ಅಪಾರ ಸ್ಫೋಟಕ ವಶ