ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೇಮಕಾತಿ ರದ್ದು: ಕರವೇ ವಿಜಯೋತ್ಸವ
ಮಹಿಳಾ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಆಂಧ್ರದ ಶಾಸಕಿಯ ನೇಮಕಾತಿಯನ್ನು ರದ್ದು ಪಡಿಸಿರುವ ರಾಜ್ಯಪಾಲರ ಕ್ರಮವನ್ನು ಸ್ವಾಗತಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ರಾಜ್ಯಾದ್ಯಂತ ವಿಜಯೋತ್ಸವ ಆಚರಿಸಿತು.

ನೇಮಕಾತಿ ಆದೇಶವನ್ನು ಹಿಂಪಡೆದಿರುವುದು ತಮ್ಮ ಹೋರಾಟಕ್ಕೆ ಸಂದ ಜಯ ಎಂದಿರುವ ವೇದಿಕೆಯ ಕಾರ್ಯಕರ್ತರು, ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.

ಬಿಜಾಪುರ ವಿವಿಗೆ ಆಂಧ್ರ ಪ್ರದೇಶದ ವಿಧಾನ ಪರಿಷತ್ ಸದಸ್ಯೆಯನ್ನು ನೇಮಕ ಮಾಡಿರುವುದನ್ನು ಖಂಡಿಸಿ ಕಳೆದ ಮೂರು ದಿನಗಳಿಂದ ಕರ್ನಾಟಕ ರಕ್ಷಣಾ ವೇದಿಕೆಯು ಟಿ.ಎ. ನಾರಾಯಣ ಗೌಡ ನೇತೃತ್ವದಲ್ಲಿ ಪ್ರತಿಭಟನೆಗೆ ಇಳಿದಿದ್ದು, 24ಗಂಟೆಗಳ ಗಡುವನ್ನು ನೀಡಿತ್ತು. ಅದರೊಳಗೆ ಆದೇಶ ಹಿಂಪಡೆಯದಿದ್ದರೆ ಮಹಿಳಾ ಕಾರ್ಯಕರ್ತರಿಂದ ರಾಜಭವನ ಮುತ್ತಿಗೆ ಹಾಕುವುದಲ್ಲದೆ ಉಗ್ರ ಪ್ರತಿಭಟನೆಗೆ ಇಳಿಯುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೆ ರಾಜ್ಯಪಾಲರು ಆದೇಶವನ್ನು ರದ್ದು ಪಡಿಸಿರುವುದು, ಕಾರ್ಯಕರ್ತರ ಸಂಭ್ರಮಕ್ಕೆ ಕಾರಣವಾಗಿದೆ.

ಈ ಮಧ್ಯೆ ಹಲವು ರಾಜಕೀಯ ಪಕ್ಷಗಳು ರಾಜ್ಯಪಾಲರು ಕೈಗೊಂಡಿರುವ ಈ ನಿರ್ಧಾರವನ್ನು ಸ್ವಾಗತಿಸಿವೆ.
ಮತ್ತಷ್ಟು
ಕಳ್ಳನಾದ ಮಾಜಿ ಪೊಲೀಸ್!
ಸುಧಾಕರ್ ನೇಮಕ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ
ಕಾಂಗ್ರೆಸ್ 'ಕೈಯೊಳಗೆ' ಪ್ರಕಾಶ್
'ಶುಭ ನುಡಿದ ಶಕುನದ ಹಕ್ಕಿ' ಹಾರಿಹೋಯಿತು
ಬೊಮ್ಮಾಯಿ ಪುತ್ರ ಸಹಿತ ಹಲವರು ಬಿಜೆಪಿಯತ್ತ
ಕನ್ನಡಿಗರ ಪ್ರತಿಭಟನೆ: ಮಹಿಳಾ ವಿವಿಗೆ ಆಂಧ್ರ ಶಾಸಕಿ ನೇಮಕ ಹಿಂದಕ್ಕೆ