ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಟಿಓ ಕಚೇರಿಗೆ ಮುತ್ತಿಗೆ
ಬೇಡಿಕೆ ಈಡೇರಿಕೆಗೆ ಆಟೋ ಚಾಲಕರ ಪ್ರತಿಭಟನೆ
ತಮ್ಮ ಹಲವು ಬೇಡಿಕೆಗಳ ಈಡೇರಿಕೆಯನ್ನು ಒತ್ತಾಯಿಸಿ ಆಟೋ ಚಾಲಕರ ಸಂಘ ಶುಕ್ರವಾರ ಕೋರಮಂಗಲದ ಪ್ರಾದೇಶಿಕ ಸಾರಿಗೆ ಕಚೇರಿಗೆ ಮುತ್ತಿಗೆ ಹಾಕಿತು.

ಆಟೋ ಎಲ್‌ಪಿಜಿ ಅನಿಲ ದರ ಇಳಿಕೆ, ಆಟೋ ಮೀಟರ್ ದರ ಕನಿಷ್ಠ ಒಂದೂವರೆ ಕಿ.ಮೀ.ಗೆ 12ರೂ. ಹಾಗೂ ಪ್ರತಿ ಕಿಲೋ ಮೀಟರ್‌ಗೆ 8ರೂ. ನಿಗದಿಪಡಿಸುವಂತೆ ಒತ್ತಾಯಿಸಿ ನೂರಾರು ಕಾರ್ಯಕರ್ತರು ಪ್ರಾದೇಶಿಕ ಸಾರಿಗೆ ಕಚೇರಿಗೆ ಮುತ್ತಿಗೆ ಹಾಕಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ವಿ. ರಾಘವೇಂದ್ರ ಅವರು, ಆಟೋ ಚಾಲಕರಿಗೆ ಇಎಸ್ಐ ಸೌಲಭ್ಯ, ಕಲ್ಯಾಣ ಮಂಡಳಿ ರಚನೆ, ಹಳದಿ ಪಡಿತರ ಚೀಟಿ, ನಿವೇಶನ ಸೇರಿದಂತೆ ಇತರ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು. ಒಂದೊಮ್ಮೆ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ರೀತಿಯ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಮತ್ತಷ್ಟು
ನೇಮಕಾತಿ ರದ್ದು: ಕರವೇ ವಿಜಯೋತ್ಸವ
ಕಳ್ಳನಾದ ಮಾಜಿ ಪೊಲೀಸ್!
ಸುಧಾಕರ್ ನೇಮಕ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ
ಕಾಂಗ್ರೆಸ್ 'ಕೈಯೊಳಗೆ' ಪ್ರಕಾಶ್
'ಶುಭ ನುಡಿದ ಶಕುನದ ಹಕ್ಕಿ' ಹಾರಿಹೋಯಿತು
ಬೊಮ್ಮಾಯಿ ಪುತ್ರ ಸಹಿತ ಹಲವರು ಬಿಜೆಪಿಯತ್ತ