ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಲಿಚರ್ಮ ಕಳ್ಳಸಾಗಣೆ: ಪೊಲೀಸರ ಮೇಲೆ ಗುಂಪು ದಾಳಿ
ಹುಲಿ ಚರ್ಮ ಕಳ್ಳಸಾಗಣೆ ಆರೋಪದ ಮೇರೆಗೆ ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದಾಗ ಅವರ ಮೇಲೆಯೇ ಹಲ್ಲೆ ನಡೆದು ಇಬ್ಬರು ಪೊಲೀಸರು ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ಬಂಟ್ವಾಳ ಸಮೀಪ ಸಂಭವಿಸಿದೆ.

ಖಚಿತ ಮಾಹಿತಿಯ ಅನುಸಾರ ಬಂಟ್ವಾಳ ತಾಲ್ಲೂಕಿನ ವಗ್ಗ ಎಂಬ ಗ್ರಾಮಕ್ಕೆ ತೆರಳಿದ ಪೊಲೀಸರು ಕಾಸರಗೋಡಿನ ತಾಜುದ್ದೀನ್ ಮತ್ತು ಮೂಲ್ಕಿಯ ಕರೀಂ ಎಂಬವರನ್ನು ಬಂಧಿಸುವ ಸಂದರ್ಭದಲ್ಲಿ ಬೈಕ್‌ಗಳಲ್ಲಿ ಧಾವಿಸಿ ಬಂದ 30ಕ್ಕೂ ಹೆಚ್ಚು ಸ್ಥಳೀಯರು ಗುಂಪುಗೂಡಿ ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ಸೇರಿದ ಪೊಲೀಸರ ಮೇಲೆ ದಾಳಿ ಮಾಡಿದರೆಂದು ತಿಳಿದುಬಂದಿದೆ.

ಈ ಸಂದರ್ಭ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆಯಬಹುದು ಎಂಬ ಸನ್ನಿವೇಶ ನಿರ್ಮಾಣವಾದ್ದರಿಂದ ಆತ್ಮರಕ್ಷಣೆಗೆ ಪೊಲೀಸರು ಎರಡು ಸುತ್ತು ಗುಂಡುಹಾರಿಸಿದ್ದರಿಂದ ಜನರ ಗುಂಪಿನಲ್ಲಿದ್ದ ಶಂಸುದ್ದೀನ್ ಎಂಬಾತ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ದಾಳಿ ನಡೆದ ಪರಿಣಾಮವಾಗಿ ಮುಖ್ಯ ಪೇದೆ ವಸಂತ ಹಾಗೂ ಪೇದೆ ಗಿರಿಯಪ್ಪ ಎಂಬುವವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಮತ್ತಷ್ಟು
ಮುಳಬಾಗಿಲು: ಕುಟುಂಬದ ಮೂವರ ಭೀಕರ ಕೊಲೆ
ಆರ್‌ಟಿಓ ಕಚೇರಿಗೆ ಮುತ್ತಿಗೆ
ನೇಮಕಾತಿ ರದ್ದು: ಕರವೇ ವಿಜಯೋತ್ಸವ
ಕಳ್ಳನಾದ ಮಾಜಿ ಪೊಲೀಸ್!
ಸುಧಾಕರ್ ನೇಮಕ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ
ಕಾಂಗ್ರೆಸ್ 'ಕೈಯೊಳಗೆ' ಪ್ರಕಾಶ್