ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕುಣಿಗಲ್-ಮಾಗಡಿಯಲ್ಲಿ ಅವ್ಯಾಹತ ಆಯಿಲ್ ದಂಧೆ
ಪೆಟ್ರೋಲ್ ಮತ್ತು ಡೀಸೆಲ್‌ಗಳ ಕಲೆಬೆರಕೆ ದಂಧೆ ಕುಣಿಗಲ್-ಮಾಗಡಿ ತಾಲ್ಲೂಕುಗಳ ಗಡಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ತಿಂಗಳ ಹಿಂದೆ ಕುಣಿಗಲ್ಲಿನಲ್ಲಿ ಈ ಕಲಬೆರಕೆ ದಂಧೆಯನ್ನು ಮಟ್ಟಹಾಕಲಾಗಿತ್ತು. ಅದರೆ ಈಗ ದಂಧೆ ನಡೆಯುತ್ತಿರುವ ಪ್ರದೇಶ ಮಾಗಡಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಡುತ್ತದಾದ್ದರಿಂದ ಕುಣಿಗಲ್ ಪೊಲೀಸರು ಅಸಹಾಯಕರಾಗಿದ್ದಾರೆ. ಆದ್ದರಿಂದ ಎರಡೂ ತಾಲ್ಲೂಕುಗಳ ಪೊಲೀಸರು ಈ ಕುರಿತು ಜಂಟಿ ಕಾರ್ಯಾಚರಣೆ ನಡೆಸುವುದರ ಬಗೆಗೆ ಮಾಗಡಿ ತಹಶೀಲ್ದಾರವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿದುಬಂದಿದೆ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ, ಮಾಗಡಿ ವ್ಯಾಪ್ತಿಗೆ ಸೇರುವ ದಾಬಾದ ಬಳಿ ಈ ದಂಧೆ ನಡೆಯುತ್ತಿದ್ದು ಟ್ಯಾಂಕ್‌ಗಳಲ್ಲಿ ಬರುವ ಪೆಟ್ರೋಲ್, ಡೀಸೆಲ್‌ಗಳನ್ನು ಇಲ್ಲಿ ಇಳಿಸಿಕೊಂಡು ಅದಕ್ಕೆ ಸೀಮೆ ಎಣ್ಣೆಯನ್ನು ಬೆರೆಸಿ ಮಾರುಕಟ್ಟೆ ದರಕ್ಕಿಂತ 5 ರೂ. ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಈ ಹಿಂದೆ ಮಂಗಳೂರಿನಲ್ಲಿ ನಡೆದ ಪೊಲೀಸ್ ಎನ್‌ಕೌಂಟರಿನಲ್ಲಿ ಬಲಿಯಾದ ರಫೀಕ್‌ನ ಸಂಬಂಧಿ ಅಜೀಜ್ ಎಂಬಾತ ಈ ದಂಧೆಯಲ್ಲಿ ಪಾಲ್ಗೊಂಡಿದ್ದಾನೆಂದು ಹೇಳಲಾಗಿದ್ದು ಈತನ ಮೇಲೆ ಈಗಾಗಲೇ ಕ್ರಿಮಿನಲ್ ಕೇಸುಗಳಿವೆ ಎಂದು ತಿಳಿದುಬಂದಿದೆ. ಇದು ಗಡಿ ಪ್ರದೇಶವಾದ್ದರಿಂದ ಕುಣಿಗಲ್ ಪೊಲೀಸರ ಕೈ ಕಟ್ಟಿಹಾಕಿದಂತಾಗಿದ್ದು, ಮಾಗಡಿ ತಾಲ್ಲೂಕಿಗೆ ಸೇರಿದ ಪೊಲೀಸರೊಂದಿಗಿನ ಜಂಟಿ ಕಾರ್ಯಾಚರಣೆ ನಡೆಸುವುದು ಸೂಕ್ತ ಎಂಬದು ಸ್ಥಳೀಯರ ಅಭಿಪ್ರಾಯ.
ಮತ್ತಷ್ಟು
'ಸಂಸ್ಕಾರ'ದಲ್ಲಿ ಸಂಸ್ಕಾರವಿಲ್ಲ: ಮಂಗಳೂರು ವಿವಿಯಲ್ಲಿ ಗುಲ್ಲು
ಹುಲಿಚರ್ಮ ಕಳ್ಳಸಾಗಣೆ: ಪೊಲೀಸರ ಮೇಲೆ ಗುಂಪು ದಾಳಿ
ಮುಳಬಾಗಿಲು: ಕುಟುಂಬದ ಮೂವರ ಭೀಕರ ಕೊಲೆ
ಆರ್‌ಟಿಓ ಕಚೇರಿಗೆ ಮುತ್ತಿಗೆ
ನೇಮಕಾತಿ ರದ್ದು: ಕರವೇ ವಿಜಯೋತ್ಸವ
ಕಳ್ಳನಾದ ಮಾಜಿ ಪೊಲೀಸ್!