ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಾಯುಕ್ತ ಪೊಲೀಸರಿಗೆ ಹೆದರಿ ಪೊಲೀಸರು ಪರಾರಿ!
ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣವೊಂದರಲ್ಲಿ, ರೋಣ ತಾಲೂಕಿನ ಗಜೇಂದ್ರಗಢದಲ್ಲಿ ಪೊಲೀಸ್ ಅಧಿಕಾರಿಗಳು ಬೈಕ್ ಸವಾರರಿಂದ ಹಣ ಸುಲಿಯಲು ಯತ್ನಿಸಿದ್ದಲ್ಲದೆ, ಲೋಕಾಯುಕ್ತ ಪೊಲೀಸರಿಗೆ ಹೆದರಿ ಪರಾರಿಯಾಗ ವಿಚಿತ್ರ ಘಟನೆ ನಡೆದಿದೆ.

ಜಿಲ್ಲೆಯ ಯಾತ್ರಾಸ್ಥಳವೊಂದರಲ್ಲಿ ದೇವಿಯ ದರ್ಶನ ಮಾಡಿಕೊಂಡು ಮೋಟಾರ್ ಬೈಕಿನಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಯುವತಿ ಬರುತ್ತಿದ್ದಾಗ ಅಡ್ಡ ಹಾಕಿ ನಿಲ್ಲಿಸಿದ ಪೊಲೀಸರು, ಮೊದಲು ಟ್ರಿಪಲ್ ರೈಡಿಂಗ್ ಸಂಬಂಧಿಸಿ ಕೇಸು ಹಾಕುವುದಾಗಿ ಹೇಳಿದರು. ಬೈಕಿನಲ್ಲಿ ಪಯಣಿಸುತ್ತಿದ್ದವರಲ್ಲೊಬ್ಬ ಜಿಲ್ಲಾ ಖಜಾನೆಯಲ್ಲಿ ನೌಕರ ಎಂದು ಗೊತ್ತಾದಾಗ, ಈ ಯುವತಿಯನ್ನು ಕರೆದುಕೊಂಡು ಹೋಗಿ ನೀವು ಅತ್ಯಾಚಾರ ಮಾಡಲು ಯತ್ನಿಸಿದಿರಿ ಎಂದು ಕೇಸು ದಾಖಲಿಸಿದರೆ ನಿಮ್ಮ ಕೆಲಸ ಹೋಗುತ್ತದೆ ಎಂದೂ ಪೊಲೀಸರು ಹೆದರಿಸಿದರು.

ನಂತರ 15 ಸಾವಿರ ಲಂಚ ಕೊಟ್ಟರೆ ಬಿಡುವುದಾಗಿ ಪೊಲೀಸರು ಹೆದರಿಸಿದಾಗ, ಅಷ್ಟೊಂದು ಕೊಡಲು ಸಾಧ್ಯವಿಲ್ಲ, ಬೇಕಿದ್ದರೆ 5 ಸಾವಿರ ಕೊಡುವೆ ಎಂದು ಹೇಳಿದ ಆ ಯುವಕ ಹಣ ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಅಲ್ಲಿಂದ ಹೊರಟ.

ಅಲ್ಲಿಂದ ಆತ ನೇರವಾಗಿ ತೆರಳಿದ್ದು ಲೋಕಾಯುಕ್ತ ಪೊಲೀಸರ ಬಳಿಗೆ. ಇವನಿಂದ ದೂರು ಪಡೆದ ಲೋಕಾಯುಕ್ತ ಪೊಲೀಸರು ಅವನು ನೀಡಿದ ಸುಳಿವಿನಂತೆ ಕಾದು ಕೂತರು. ಗಜೇಂದ್ರಗಢ ಠಾಣೆಯಲ್ಲಿ ಆತ ಲಂಚ ನೀಡುವಾಗ ಠಾಣೆಯ ಮೇಲೆ ದಾಳಿ ನಡೆಸಿದರು.

ಆದರೆ ವಿಚಿತ್ರವೆಂದರೆ, ಈ ದಾಳಿಯಲ್ಲಿ ಪೊಲೀಸ್ ಪೇದೆ ಮಾತ್ರ ಸಿಕ್ಕಿಕೊಂಡಿದ್ದು, ಎಸ್ಐ ಮತ್ತು ಎಎಸ್ಐ ಠಾಣೆಯಿಂದ ಪರಾರಿಯಾದರೆಂದು ಸುದ್ದಿಮೂಲಗಳು ತಿಳಿಸಿವೆ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.
ಮತ್ತಷ್ಟು
ಕುಣಿಗಲ್-ಮಾಗಡಿಯಲ್ಲಿ ಅವ್ಯಾಹತ ಆಯಿಲ್ ದಂಧೆ
'ಸಂಸ್ಕಾರ'ದಲ್ಲಿ ಸಂಸ್ಕಾರವಿಲ್ಲ: ಮಂಗಳೂರು ವಿವಿಯಲ್ಲಿ ಗುಲ್ಲು
ಹುಲಿಚರ್ಮ ಕಳ್ಳಸಾಗಣೆ: ಪೊಲೀಸರ ಮೇಲೆ ಗುಂಪು ದಾಳಿ
ಮುಳಬಾಗಿಲು: ಕುಟುಂಬದ ಮೂವರ ಭೀಕರ ಕೊಲೆ
ಆರ್‌ಟಿಓ ಕಚೇರಿಗೆ ಮುತ್ತಿಗೆ
ನೇಮಕಾತಿ ರದ್ದು: ಕರವೇ ವಿಜಯೋತ್ಸವ